ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ.

ನವಿಲು ತೊಟ್ಟ ಬಣ್ಣದ ಅಂಗಿಯ
ಬಟ್ಟೆ ಯಾವುದು?
ಪಾತರಗಿತ್ತಿಯ ಮಿನುಗುವ ಪಕ್ಕದ
ರೇಶ್ಮೆ ಎಲ್ಲಿಯದು?

ಕಪ್ಪು ಕೂದಲ ಕರಡಿ ಬಳಸುವ
ಶ್ಯಾಂಪು ಯಾವುದು?
ಕಾಡಿನ ಹುಲಿಮರಿ ಹಲ್ಲನು ಉಜ್ಜುವ
ಪೇಸ್ಟು ಎಲ್ಲಿಯದು?

ಮಿರಿಮಿರಿ ಮಿಂಚುವ ಮೀನು ಬಳಸುವ
ಸಾಬೂನು ಯಾವುದು?
ಜಾಣ ಗಿಳಿಮರಿ ತುಟಿಗೆ ಹಚ್ಚುವ
ಲಿಪ್‍ಸ್ಟಿಕ್ ಎಲ್ಲಿಯದು?

ಕುಹೂ ಕುಹೂ ಕೋಗಿಲೆ ಹಾಡಿನ
ರಾಗ ಯಾವುದು?
ಚಿಲಿಪಿಲಿ ಗುಟ್ಟುವ ಹಕ್ಕಿ ಬಳಸುವ
ಬಾಶೆ ಯಾವುದು?

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: