ಸತ್ಯಮೇವ ಜಯತೆ

– ಪೂರ‍್ಣಿಮಾ ಎಮ್ ಪಿರಾಜಿ.

ಗಡಿಕಾಯುವ ಯೋದರಿಗೆ
ಗೂಡಾಗಿರುವ ಮಾತೆ
ಬೂಮಿತಾಯಿ ಮಗನ
ಕೈ ಹಿಡಿವ ಅನ್ನದಾತೆ

ಜಯ ಜಯ ಬಾರತ ಮಾತೆ
ಹೇ ಬಗವತಿ, ಸತ್ಯಮೇವ ಜಯತೆ

ದರ‍್ಮ ರಕ್ಶಣೆಗೆ ಪಾರ‍್ತನ ಸಮರ
ಪಸರಿಸು ದೇಶ ಬಕ್ತಿಯ ಗೀತೆಸಾರ
ನ್ಯಾಯ-ನೀತಿ, ಸತ್ಯ ದರ‍್ಮಗಳ ಜೇಂಕಾರ
ಕಲಿಸಿ ಕೊಡುವುದು ದೇಶ ಬದಕುವ ಸಂಸ್ಕಾರ

ಜಯ ಜಯ ಬಾರತ ಮಾತೆ
ಹೇ ಬಗವತಿ, ಸತ್ಯಮೇವ ಜಯತೆ

ಕುಲದೊಳು ಹೊಕ್ಕು ಕುಲಕುಲವೆಂದು
ಬಡೆದಾಡುವ ಮನುಕುಲವೇ,
ಮಾನವೀಯತೆಯ ನೀ ಮರೆಯದಿರು
ಮಾನವ ದರ‍್ಮವ ನೀ ತೊರೆಯದಿರು
ಬ್ರಶ್ಟಾಚಾರಕೆ ಕೈ ಚಾಚಿ,
ಅನಾಚಾರಕೆ ತಲೆ ಬಾಗದಿರು

ಜಯ ಜಯ ಬಾರತ ಮಾತೆ
ಹೇ ಬಗವತಿ, ಸತ್ಯಮೇವ ಜಯತೆ

( ಚಿತ್ರ ಸೆಲೆ:   indiaflag.facts.co )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: