ರುಚಿ ರುಚಿಯಾದ ಸೀಗಡಿ ಹುರುಕಲು

– ಪ್ರತಿಬಾ ಶ್ರೀನಿವಾಸ್.

ಬೇಕಾಗುವ ಸಾಮಾಗ್ರಿಗಳು:

ಸೀಗಡಿ – 1/4 ಕೆಜಿ
ಈರುಳ್ಳಿ – 2
ತುಪ್ಪ – 3 ರಿಂದ 4 ಚಮಚ
ಹಸಿಮಣಸು – 3 (ಉದ್ದಕ್ಕೆ ಹೆಚ್ಚಿದ್ದು)
ಕರಿಬೇವು – 15 ಎಸಳು
ಕಾರದ ಪುಡಿ – 2 ಚಮಚ
ಕಾಳುಮೆಣಸಿನ ಪುಡಿ – 1 ಚಮಚ
ದನಿಯಾ ಪುಡಿ – 1 ಚಮಚ
ಗರಂಮಸಾಲ ಪುಡಿ – 1 ಚಮಚ
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಶ್ಟು
ಸೋಯಾಸಾಸ್ – 1 ಚಮಚ

ಮಾಡುವ ಬಗೆ:

ಶುಚಿಗೊಳಿಸಿದ ಸೀಗಡಿ ಮೀನಿಗೆ ಅರಿಶಿನ, ಉಪ್ಪು, ಕಾಳು ಮೆಣಸಿನ ಪುಡಿ, 1/2 ಚಮಚ ಗರಂಮಸಾಲೆ ಪುಡಿ, 1 ಚಮಚ ಕಾರದ ಪುಡಿ ಮತ್ತು ಸೋಯಾಸಾಸ್ ಹಾಕಿ ಚೆನ್ನಾಗಿ ಕಲಸಿ ಅರ‍್ದಗಂಟೆ ಇಡಬೇಕು. ಬಳಿಕ ಒಂದು ಬಾಣಲೆಯನ್ನು ಬಿಸಿಮಾಡಿ ಅದಕ್ಕೆ ತುಪ್ಪ ಹಾಕಿ, ಅದು ಕಾದಮೇಲೆ ಕರಿಬೇವು, ಹಸಿಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಆಮೇಲೆ ಇದಕ್ಕೆ ಕಲಸಿಟ್ಟ ಸೀಗಡಿ ಹಾಕಿ 1/2 ಲೋಟ ನೀರು, ಹಾಗೇ ರುಚಿಗೆ ತಕ್ಕಶ್ಟು ಉಪ್ಪು ಹಾಕಿ 6-8 ನಿಮಿಶ ಬೇಯಲು ಬಿಡಿ. ಬಳಿಕ 1 ಚಮಚ ಕಾರದ ಪುಡಿ, ದನಿಯಾ ಪುಡಿ, 1/2 ಚಮಚ ಗರಂಮಸಾಲೆಪುಡಿ ಹಾಕಿ ಚೆನ್ನಾಗಿ ಹುರಿದರೆ ಸೀಗಡಿ ಹುರುಕಲು ಸವಿಯಲು ಸಿದ್ದ. ಬೇಕಾದಲ್ಲಿ ಕೊನೆಗೆ ನಿಂಬೆರಸ ಹಿಂಡಿಕೊಳ್ಳಬಹುದು.

(ಚಿತ್ರ ಸೆಲೆ:  ಪ್ರತಿಬಾ ಶ್ರೀನಿವಾಸ್.)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *