ಹುರಕ್ಕಿ ಹೋಳಿಗೆ

– ಸವಿತಾ.

ಏನೇನು ಬೇಕು?

250 ಗ್ರಾಂ – ನವಣೆ ಅಕ್ಕಿ
125 ಗ್ರಾಂ – ಬೆಲ್ಲ
250 ಗ್ರಾಂ – ಮೈದಾ
250 ಗ್ರಾಂ – ಎಣ್ಣೆ (ಕರಿಯಲು)
3 ಟೀ ಚಮಚ – ನೀರು
4 ಟೀ ಚಮಚ – ಚಿರೋಟಿ ರವೆ
2 ಟೀ ಚಮಚ – ಎಣ್ಣೆ ( ನಾದಲು)
4 ಏಲಕ್ಕಿಯ ಪುಡಿ

ಮಾಡುವ ಬಗೆ:

  • ನವಣೆಯನ್ನು ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ, ಮಿಕ್ಸರ್ ನಲ್ಲಿ ಹಿಟ್ಟು ಮಾಡಿ ಇಟ್ಟುಕೊಳ್ಳಿ
  • ಮೈದಾ ಹಿಟ್ಟು ಮತ್ತು ಚಿರೋಟಿ ರವೆಗೆ ಸ್ವಲ್ಪ ಎಣ್ಣೆ ಹಾಕಿ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದನ್ನು ಬಟ್ಟೆಯಿಂದ ಮುಚ್ಚಿ ಒಂದು ಗಂಟೆ ಇಡಬೇಕು.
  • ಒಂದು ದಪ್ಪ ತಳದ ಪಾತ್ರೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ, ಅದು ಕರಗಲು ಸಣ್ಣ ಉರಿಯಲ್ಲಿ ಇಡಿ
  • ಬೆಲ್ಲ ಕರಗುತ್ತಿರುವಾಗಲೇ ನವಣೆ ಹಿಟ್ಟು ಸೇರಿಸಿ ತಿರುಗಿಸಿ
  • ಎಲ್ಲಾ ಸರಿಯಾಗಿ ಕೂಡಿದ ಬಳಿಕ ಗ್ಯಾಸ್ ಆರಿಸಿ, ಈ ಮಿಶ್ರಣವನ್ನು ಆರಲು ಬಿಡಿ
  • ಸ್ವಲ್ಪ ಹೊತ್ತಿನ ಬಳಿಕ ಏಲಕ್ಕಿ ಪುಡಿ ಸೇರಿಸಿರಿ
  • ನಂತರ ನವಣೆ ಹಿಟ್ಟು, ಬೆಲ್ಲದ ಪಾಕ ಮತ್ತು ಏಲಕ್ಕಿ ಪುಡಿಯ ಮಿಶ್ರಣವನ್ನು ಚೆನ್ನಾಗಿ ನಾದಿ, ಹೋಳಿಗೆಗೆ ತುಂಬಲು ಹೂರಣದ ಉಂಡೆ ಮಾಡಿಕೊಳ್ಳಿರಿ
  • ಕಲಸಿ ಇಟ್ಟ ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಇನ್ನೊಮ್ಮೆ ಚೆನ್ನಾಗಿ ನಾದಿರಿ
  • ಉಂಡೆಯಶ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ಚಪ್ಪಟೆ ಮಾಡಿ ನವಣೆ ಹೂರಣ ತುಂಬಿ
  • ಪೂರಿ ಆಕಾರದಶ್ಟು ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ

ರುಚಿಕರ ಮತ್ತು ಆರೋಗ್ಯಕರ ಹುರಕ್ಕಿ ಹೋಳಿಗೆ ಸವಿಯಿರಿ

ಚಿತ್ರ ಸೆಲೆ: ಸವಿತಾ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: