ಕಾಯಕ ಯೋಗಿ ಬಸವಣ್ಣ
– ಶಾಂತ್ ಸಂಪಿಗೆ.
ಕನ್ನಡ ನಾಡಿನ ಹೊನ್ನಿನ ಮಣ್ಣಲಿ
ಜನಿಸಿದ ಗುರುವು ಬಸವಣ್ಣ
ಅಂತರಂಗವೇ ದೇವರ ಗುಡಿಯು
ಅರಿವೇ ಗುರುವು ಬಸವಣ್ಣ
ಶುದ್ದ ಮನಸಲಿ ಬಕ್ತರಾದರೆ
ಅವರೇ ದೈವವು ಬಸವಣ್ಣ
ಸತ್ಯ ದರ‍್ಮದಿ ಕಾಯಕ ಮಾಡಿ
ಶಕ್ತಿಯ ನೀಡುವ ಬಸವಣ್ಣ
ಹಸಿದ ಹೊಟ್ಟೆಗೆ ಪ್ರಸಾದ ನೀಡಿ
ಮೆಚ್ಚುವ ದೇವರು ಬಸವಣ್ಣ
ಸತಿ-ಪತಿಗಳು ಸಮಾನರೆಂದು
ನುಡಿದ ಗುರುವು ಬಸವಣ್ಣ
ಪ್ರಜಾಪ್ರಬುತ್ವಕೆ ಮನ್ನುಡಿ ಬರೆದರು
ಅನುಬವ ಮಂಟಪದಿ ಬಸವಣ್ಣ
ಬಕ್ತಿಯ ನಾಡಿಗೆ ವಚನಾಮ್ರುತ ನೀಡಿದ
ಬಕ್ತರ ಪ್ರಿಯ ಬಸವಣ್ಣ
ಎಲ್ಲರ ಕಾಯಕ ಶ್ರೇಶ್ಟವು ಎಂದ
ಕಾಯಕ ಯೋಗಿ ಬಸವಣ್ಣ
ಮೇಲು ಕೀಳು ಎಲ್ಲವ ತೊರೆದು
ಬೆರೆತರೆ ಮುಕ್ತಿ ಬಸವಣ್ಣ
ಅಂದಕಾರವ ಅಳಿಸಿದ ಗುರುವು
ಜ್ನಾನ ಜ್ಯೋತಿಯು ಬಸವಣ್ಣ
ಬಕ್ತಿ ಮಾರ‍್ಗದಿ ನಾಡನು ಕಟ್ಟಿದ
ಕ್ರಾಂತಿ ಯೋಗಿಯು ಬಸವಣ್ಣ
ಮುಕ್ತಿ ಪಡೆಯಲು ನೀಡಿದ ಬೆಳಕು
ದಾರಿದೀಪವು ಬಸವಣ್ಣ
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು