ಕನ್ನಡಿಗರ್ ಮತ್ತು ನಮ್ಮದೇ ಸೊಡರ್

– .

Kannada, Kannadiga, Karnataka, strength of Karnataka, ಕನ್ನಡಿಗರ ಶಕ್ತಿ, ಕನ್ನಡ, ಕರ‍್ನಾಟಕ

ಮುಸುಕೊದ್ದು ಮಲಗಿರುವೆಯೋ…?
ಕುಂಬಕರ‍್ಣ ಕನ್ನಡಿಗನೇ,
ಸಾಕಿನ್ನು ಈ ನಿದ್ರೆ

ಇನ್ನು ಮಲಗದಿರ್
ಕಾಲವಿದು… ತಕ್ಕದ್ದು,
ಒತ್ತೋ ಕನ್ನಡದ ಮುದ್ರೆ

ನಿನ್ನ ಒಡೆತನದ ಹಣತೆಯದು,
ನೀನೇ ಹೊಸೆದ ಬತ್ತಿಯದು,
ನೀನೇ ಸುರಿದ ಎಣ್ಣೆಯದು,
ಕಡೆಗೆ, ಬೆಳಗಿದ್ದು ನೀನೇ

ಬೆಳಗಿದ ಹಣತೆಯ ಬಳಸುತಿಹರವರ್
ಇದಕೆಲ್ಲಿಯದೋ ಕೊನೆ…?

ಹೆಕ್ಕಿ ತಿನ್ನಬಂದವರ್, ಕುಕ್ಕಿ ತಿನ್ನುತಿಹರ್
ನೋಯದೇ ಕನ್ನಡಿಗನೇ?
ಅಡಿಗಾಗಿ ಬಂದವರ್ ಎಡೆಯೇ ತಮ್ಮದೆಂದರ್
ಕದಿಯುತಿಹರ್ ನಿನ್ನ ಮನೆ

ಇನ್ನಾದರೂ ಎಚ್ಚೆತ್ತುಕೊಳ್ಳೋ, ಮರುಳೇ
ನಿನ್ನ ನೆಲದೊಳ್ ನೀನೇ ಮೂಲೆಗುಂಪು
ಬರಿಯ ಎದ್ದೇಳದೆ ಸಿಡಿದೆದ್ದೇಳೋ…
ಹರಡಲಣಿಯಾಗು ಕನ್ನಡದ ಕಂಪು…

(ಸೊಡರ್ – ದೀಪ, ಹಣತೆ, ದೀವಿಗೆ; ಎಡೆ – ಜಾಗ, ಸ್ತಳ)

(ಚಿತ್ರ ಸೆಲೆ: thenewsminute.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Vishal Sg says:

    bahaLa chennagide?

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *