ಗೆಣಸಿನ ಹೋಳಿಗೆ
– ಸವಿತಾ.
ಕಣಕದ ಹಿಟ್ಟು ಮಾಡಲು ಬೇಕಾಗುವ ಪದಾರ್ತಗಳು:
- 1 ಲೋಟ ಮೈದಾ ಹಿಟ್ಟು
- 1/2 ಲೋಟ ಚಿರೋಟಿ ರವೆ
- 2 ಟೀ ಚಮಚ ಕಾಯಿಸಿದ ಎಣ್ಣೆ
- 1/4 ಚಮಚ ಉಪ್ಪು
ಹಿಟ್ಟು, ರವೆ, ಎಣ್ಣೆ, ಸ್ವಲ್ಪ ಉಪ್ಪು, ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ನಾದಿ, ಮೇಲೆ ಒಂದು ಬಟ್ಟೆ ಮುಚ್ಚಿ 2 ಗಂಟೆ ಇಡಿರಿ.
ಹೂರಣ ಮಾಡಲು ಬೇಕಾಗುವ ಪದಾರ್ತಗಳು:
- 2 ಮದ್ಯಮ ಗಾತ್ರದ ಗೆಣಸು ಅತವಾ 1 ದೊಡ್ಡ ಗೆಣಸು
- 1/2 ಲೋಟ ಬೆಲ್ಲದ ಪುಡಿ
- 2 ಏಲಕ್ಕಿಯ ಪುಡಿ
ಮಾಡುವ ಬಗೆ:
- ಗೆಣಸು ಕುದಿಸಿ ಸಿಪ್ಪೆ ತೆಗೆಯಿರಿ (ಕುಕರ್ ನಲ್ಲಿ ಆದರೆ 3 ಕೂಗು ಬರುವವರೆಗೆ ಕುದಿಸಿ)
- ಬೆಲ್ಲದ ಪುಡಿ ಸಣ್ಣ ಉರಿಯಲ್ಲಿ ಇಟ್ಟು ಕರಗಿಸಿ (ನೀರು ಹಾಕಬೇಡಿ)
- ನುರಿದ/ಕಿವುಚಿದ ಗೆಣಸನ್ನು ಸೇರಿಸಿ, ಚೆನ್ನಾಗಿ ತಿರುಗಿಸಿ, ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಒಲೆ ಆರಿಸಿ ಕೆಳಗಿಳಿಸಿ
- ಏಲಕ್ಕಿಯ ಪುಡಿ ಸೇರಿಸಿ ಆರಲು ಬಿಡಿ
- ಕಣಕದ ಹಿಟ್ಟು ಇನೊಮ್ಮೆ ಚೆನ್ನಾಗಿ ನಾದಿಕೊಳ್ಳಿ
- ನಿಂಬೆಹಣ್ಣು ಗಾತ್ರದ ಅಳತೆಯಶ್ಟು ಹಿಟ್ಟು ತೆಗೆದುಕೊಂಡು, ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಚಪ್ಪಟೆಯಾಗಿ ಲಟ್ಟಿಸಿ
- ಗೆಣಸಿನ ಹೂರಣ ತುಂಬಿ, ಎಣ್ಣೆ ಹಚ್ಚಿ ಮತ್ತೊಮ್ಮೆ ಲಟ್ಟಿಸಿರಿ
- ತವೆ ಬಿಸಿ ಮಾಡಿ, ಸಣ್ಣ ಉರಿಯಲ್ಲಿ ಎರಡು ಬದಿ ಬೇಯಿಸಿ ತೆಗೆಯಿರಿ
- ಗೆಣಸಿನ ಹೋಳಿಗೆಯನ್ನು ತುಪ್ಪದ ಜೊತೆ ಸವಿಯಿರಿ.
ಚಳಿಗಾಲದಲ್ಲಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು.
ಇತ್ತೀಚಿನ ಅನಿಸಿಕೆಗಳು