ಹೇಳು ದೇವಾ ಈ ಸಮಾಜಕ್ಕೇನಾಯ್ತು?

– ಶರಣು ಗೊಲ್ಲರ.

ಹೇಳು ದೇವಾ ಈ ಸಮಾಜಕ್ಕೇನಾಯ್ತು?
ಒಂದೂ ತಿಳಿಯದಾಯ್ತು

ಜಾತಿ-ಬೇದ ಹುಟ್ಟಿ ಪ್ರೀತಿ ಹೋಯ್ತು
ನೀತಿಯು ಮೊದಲೇ ಹಾಳಾಯ್ತು
ಮೌಡ್ಯ-ಬೀತಿಯಿಂದ ಜನ ನಲುಗುವಂತಾಯ್ತು

ಸ್ನೇಹ-ಸೌಹಾರ‍್ದತೆಯು ಸರಿದು
ಹ್ರುದಯಪ್ರೇಮವು ಮುರಿದು ಬಿತ್ತು
ಮಾತಿನಮೇಲೊಂದು ಮಾತು ತೆಗೆದುಕೊಂಡೂ
ಮೋಸ ವಂಚನೆ ಬೆಳೆಯಿತು

ಪರರಿಶ್ಟವ ಕೇಳದೆ, ಕಶ್ಟ-ನಶ್ಟವ ನೋಡದೆ
ಬ್ರಶ್ಟರಾಜ್ಯವು ಸ್ರುಶ್ಟಿಯಾಯ್ತು
ದ್ವೇಶವೆಂಬ ವಿಶವು ನೆತ್ತಿಗೇರಿ
ಶಾಂತಿಯು ಇಲ್ಲದಾಯ್ತು

ಅಜ್ನಾನವೆಂಬ ಹಾವಳಿಯು ಹೆಚ್ಚಾಗಿ
ಮನ-ಮನಸ್ಸುಗಳ ದೂರ ಹೆಚ್ಚಾಯ್ತು
ಬಂದು-ಬಳಗವೆಂಬ ಬಳ್ಳಿ ಹರಿದು
ಶರಣಬಸವ ನನಗೊಂದೂ ತಿಳಿಯದಾಯ್ತು

(ಚಿತ್ರ ಸೆಲೆ: al-taiclub.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *