ಅಮ್ಮ, ತೋರಿಸು ಎನ್ನ ಮೇಲೆ ಮರುಕ

– ಸ್ಪೂರ‍್ತಿ. ಎಂ.

ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ
ನಿನ್ನ ಕಂದನ ತೊರೆದು ನೀ ಹೇಗೆ ಇರುವೆ?

ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ
ನಿನ್ನಿಂದ ಈ ತರದ ಮೋಸ ತರವಲ್ಲ

ಬ್ರೂಣದಲ್ಲಿದ್ದಾಗ ನೀ ನನ್ನ, ನಾ ನಿನ್ನ ನೋಡಲಿಲ್ಲ
ಹೊರಗೆ ಬಂದಾಗ ನಿನ್ನ ನನ್ನ ನಂಟು ಬಿಡಿಸಲಾಗಲಿಲ್ಲ

ಕ್ರೂರಿ ದೇವರಿಗೆ ನಂಟು ನೋಡಿ ಸಹಿಸಲಾಗಲಿಲ್ಲ
ಹಾಗಾಗಿ ಇಂದು ನೀನು ನನಗೆ ಕಾಣುತ್ತಿಲ್ಲ

ನೀನಿದ್ದರೆ ಮನೆ ಸ್ವರ‍್ಗ, ಇಲ್ಲದಿದ್ದರೆ ಅದು ನರಕ
ನೀ ಸ್ವಲ್ಪ ತೋರಿಸು ಎನ್ನ ಮೇಲೆ ಮರುಕ

ಈ ರಕ್ತ, ಈ ಪ್ರಾಣ ನೀನು ಕೊಟ್ಟ ಬಿಕ್ಶೆ
ನಿನ್ನ ಆಶೀರ‍್ವಾದವೇ ಎನಗೆ ಶ್ರೀರಕ್ಶೆ

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Gana Shri says:

    ತುಂಬಾ ಚೆನ್ನಾಗಿದೆ…???

  2. ಕಾ ಶಿನಾಯಕ says:

    ತುಂಬಾ ಚೆನ್ನಾಗಿದೆ ಅಮ್ಮ ನ

  3. Prathima T says:

    ಮನ ಮುಟ್ಟಿದ ಕವಿತೆ

Gana Shri ಗೆ ಅನಿಸಿಕೆ ನೀಡಿ Cancel reply