ಶೇಂಗಾ ಉಂಡೆ

–  ಸವಿತಾ.

ಶೇಂಗಾ ಉಂಡೆ, Shenga Unde

ಏನೇನು ಬೇಕು?

 • 1 ಬಟ್ಟಲು ಶೇಂಗಾ
 • 3/4 ಬಟ್ಟಲು ಬೆಲ್ಲ
 • 1 ಚಮಚ ಗಸಗಸೆ
 • ಏಲಕ್ಕಿ ಪುಡಿ

ಮಾಡುವ ಬಗೆ

 • ಶೇಂಗಾಕಾಳುಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯರಿ
 • ಚಾಪೆಯನ್ನು ಅತವಾ ಒಣ ಬಟ್ಟೆಯನ್ನು ಹಾಸಿ ಹುರಿದ ಶೇಂಗಾಕಾಳುಗಳನ್ನು ಹಾಕಿರಿ
 • ಶೇಂಗಾಕಾಳುಗಳು ತುಸು ಆರಿದ ಮೇಲೆ ಕಾಳುಗಳನ್ನು ಒಡೆಯಿರಿ
 • ಬಳಿಕ ಕಾಳುಗಳನ್ನು ಮೊರದಲ್ಲಿ ಕೇರಿ ಸಿಪ್ಪೆ ಮತ್ತು ಕಾಳುಗಳನ್ನು ಬೇರೆ ಮಾಡಿ
 • ಬೆಲ್ಲಕ್ಕೆ, ತೋಯುವಶ್ಟು ಅತವಾ ನಾಲ್ಕು ಚಮಚ ನೀರು ಹಾಕಿ ಕುದಿಯಲು ಇಡಿ.
 • ಏರುಪಾಕ ಬರುವಶ್ಟು ಕುದಿಸಿ ಇಳಿಸಿ, ಏಲಕ್ಕಿ ಪುಡಿ ಹಾಕಿ ಮತ್ತು ಗಸಗಸೆ ಸೇರಿಸಿ
 • ನಂತರ ಶೇಂಗಾಕಾಳು ( ಕಡಲೆಬೀಜ) ಹಾಕಿ ಚೆನ್ನಾಗಿ ತಿರುಗಿಸಿ.
 • ತಣ್ಣೀರಿನಲ್ಲಿ ಕೈ ಅದ್ದಿ ಒಂದೊಂದೇ ಉಂಡೆ ಕಟ್ಟಿರಿ. ಈಗ ಶೇಂಗಾ ಉಂಡೆ ರೆಡಿ 🙂

ಒಂದು ತಟ್ಟೆಗೆ ತುಪ್ಪ ಸವರಿ, ಪಾಕದಲ್ಲಿರುವ ಶೇಂಗಾಕಾಳನ್ನು ತಟ್ಟೆಗೆ ಹಾಕಿ, ಚಿಕ್ಕ ಚಿಕ್ಕ ಚೌಕಗಳಾಗಿ ಕತ್ತರಿಸಿ, ಶೇಂಗಾ ಚಿಕ್ಕಿ ಕೂಡ ಮಾಡಬಹುದು 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.