ನಿನ್ನ ಜೊತೆಗೆ ಸೇರಿ ನಾನು ಆದೆ ಮಗುವು

– ಸಿಂದು ಬಾರ‍್ಗವ್.

ತಾಯಿ ಮತ್ತು ಮಗು, Mother and Baby

 

ನೂರು ಕನಸ ಹೊಸೆದು ನಾನು
ನವಮಾಸ ದೂಡಿದೆ
ಗರ‍್ಬದಲ್ಲಿ ಕುಳಿತೇ
ನೀನು ಮಾತನಾಡಿದೆ

ನಿನ್ನ ಕಂಗಳಲ್ಲಿ ಕಂಡೆ
ನನ್ನ ಹೋಲಿಕೆ
ನಿನ್ನ ನಗುವಿನಲ್ಲಿ ಕಂಡೆ
ಹೊಸತು ಒಂದು ಮಾಲಿಕೆ

ನಿನ್ನ ಕೈಯ ಹಿಡಿದು
ನಡೆಸುವ ತವಕವು
ನಿನ್ನ ತೊದಲು ನುಡಿಯ
ಕೇಳುವ ಬಯಕೆಯು

ನಿನ್ನ ಜೊತೆಗೆ ಸೇರಿ
ನಾನು ಆದೆ ಮಗುವು
ನಿನ್ನ ಮುಗ್ದ ಮನಸಿಗೆ
ನನ್ನ ಕೋಟಿ ನಮನವು

(ಚಿತ್ರಸೆಲೆ: sproulegenealogy.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. padmanabha d says:

    ಸುಂದರ ಭಾವಲಹರಿ

ಅನಿಸಿಕೆ ಬರೆಯಿರಿ: