ಬಂಗಡೆ ಮೀನಿನ ಪುಳಿಮುಂಚಿ

– ಪ್ರತಿಬಾ ಶ್ರೀನಿವಾಸ್.

ಬಂಗಡೆ ಪುಳಿಮುಂಚಿ Fish Dryಬೇಕಾಗುವ ಸಾಮಾಗ್ರಿಗಳು:

ಬಂಗಡೆಮೀನು – 1/2 ಕಿ. ಲೋ.
ಒಣಮೆಣಸು – 20
ಕಾಳುಮೆಣಸು – 1 ಚಮಚ
ಜೀರಿಗೆ – 1ಚಮಚ
ಮೆಂತೆ – 1/4 ಚಮಚ
ದನಿಯಾ – 3 ಚಮಚ
ಹುಣಸೇಹುಳಿ – 1 1/2 ಲಿಂಬೆ ಗಾತ್ರದಶ್ಟು
ಬೆಳ್ಳುಳ್ಳಿ ಎಸಳು – 10(ಸಿಪ್ಪೆ ತೆಗೆದಿರಬೇಕು)
ಶುಂಟಿ -1 ಇಂಚು
ಈರುಳ್ಳಿ – 1/2
ಅರಿಶಿನ – ಚಿಟಿಕೆ
ಕೊಬ್ಬರಿಎಣ್ಣೆ – 4 ಚಮಚ
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ:

ಮೊದಲು ಮೀನನ್ನು ಶುಚಿಗೊಳಿಸಿ ತುಂಡರಿಸಿ ಇಡಬೇಕು. ಒಣಮೆಣಸನ್ನು ಬಾಣಲೆಗೆ ಹಾಕಿ ಬಿಸಿ ಆಗುವವರೆಗೆ ಹುರಿಯಿರಿ. ನಂತರ ದನಿಯಾ, ಕಾಳುಮೆಣಸು, ಜೀರಿಗೆ, ಮೆಂತೆ ಇಶ್ಟನ್ನೂ ಹುರಿಯಬೇಕು. ಬಳಿಕ ಹುರಿದ ಮಾಸಾಲೆ ಪದಾರ‍್ತಗಳಿಗೆ ಶುಂಟಿ, ಬೆಳ್ಳುಳ್ಳಿ, ಈರುಳ್ಳಿ, ಅರಿಶಿನ, ಹುಣಸೇಹುಳಿ ಹಾಕಿ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ದಪ್ಪತಳದ ಅಗಲವಾದ ಬಾಣಲೆಗೆ 4 ಚಮಚ ಕೊಬ್ಬರಿ ಎಣ್ಣೆ ಹಾಕಿ ಕಾದನಂತರ ರುಬ್ಬಿದ ಮಸಾಲೆ ಹಾಕಿ ಉಪ್ಪು ಹಾಕಿ, ಕುದಿಯಲು ಶುರುವಾದಾಗ ಮೀನಿನ ತುಂಡುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಮಸಾಲೆ ಗಟ್ಟಿಯಾಗುವವರೆಗೂ ಕುದಿಸಿದರೆ ಮಂಗಳೂರು ಶೈಲಿಯ ಪುಳಿಮುಂಚಿ ಸಿದ್ದವಾಗುತ್ತದೆ.

(ಚಿತ್ರ ಸೆಲೆ: ಪ್ರತಿಬಾ ಶ್ರೀನಿವಾಸ್.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: