ಬಾಗ್ಯದಾತ ವೈದ್ಯ

– ಪೂರ‍್ಣಿಮಾ ಎಮ್ ಪಿರಾಜಿ.

ಆರೋಗ್ಯವೇ ಬಾಗ್ಯ
ಬಾಗ್ಯ ಮರಳಿ ಕೊಡಿಸುವವನೇ ವೈದ್ಯ

ದೇಶದ ಬೆನ್ನೆಲುಬು ರೈತ
ರೋಗಿಯ ಬೆನ್ನೆಲುಬು ವೈದ್ಯ

ಅರ‍್ದ ರಾತ್ರಿಯಲ್ಲೂ ಕುಡಿಯುವರು ಮದ್ಯ
ಮದ್ಯರಾತ್ರಿಯಲ್ಲೂ ಸೇವೆ ಮಾಡುವರು ವೈದ್ಯ

ಸೊಳ್ಳೆಯಿಂದ ಮಲೇರಿಯಾ ಬಂತು ಕಚ್ಚಲು
ಮದ್ದು ಹಿಡಿದು ನಿಂತ ವೈದ್ಯ ಚುಚ್ಚಲು

ಹಲ್ಲು ಹುಳುಕಿಗೆ ಕಾರಣ ಸಿಹಿ ಚಾಕಲೇಟ
ಆರೋಗ್ಯ ಸರಿಯಾಗಲು ತಿನ್ನಬೇಕು ಕಹಿ ಟ್ಯಾಬ್ಲೇಟ

ಸೂತ್ರ ಬಿಟ್ಟುಹಿಡಿದು ಜೀವನದ ಅರಿವು ಮೂಡಿಸೋ ಬಗವಂತ
ದೇಹದ ಸೂತ್ರ ಆತ್ಮ ಬಿಟ್ಟು ಹೋಗದಂತೆ ರಕ್ಶಿಸಲು ನಿಂತ ಈ ಬಾಗ್ಯದಾತ

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: