ಮುಚ್‍ಬ್ಯಾಡ್ರಪ್ಪೊ ಕನ್ನಡ ಸಾಲಿ
ಮುಚ್ತಾರಂತೋ ಯಪ್ಪಾ
ನಮ್ಮೂರ ಕನ್ನಡ ಸಾಲಿ
ಇರೊದೊಂದ ಕಲಿಯೋಕೆ
ನಮಗ ನಮ್ಮೂರ ಕನ್ನಡ ಸಾಲಿ
ಮಕ್ಕಳಿಲ್ಲಂತ ನಮ್ಮೂರ ಸಾಲಿಗೆ
ಕೊಡಾಕ ರೊಕ್ಕಿಲ್ಲಂತ ಸರ‍್ಕಾರ‍್ದಾಗೆ
ಇಂದಿನ ಮಕ್ಕಳೆ ನಾಳಿನ ಪ್ರಜೆ ಅಂತೀರಿ
ಕಲಿಯಾಕ ಇರೂ ಸಾಲಿ ಮುಚ್ತೀರಿ
ನಮ್ಮಪ್ಪಮ್ಮಂಗ ನಾನೊಬ್ನ ಮಗ
ಪಕ್ಕದೂರಿಗೆ ಕಲಿಯಾಕ ಕಳ್ಸಲ್ರೊ ಯಪ್ಪಾ
ಕಾನ್ವೆಂಟ್ ಸಾಲಿಗೆ ಸೇರ‍್ಸೋಕ ರೊಕ್ಕಿಲ್ಲ
ಇಂಗ್ಲೀಶ್ ಸಾಲಿಗೋಗಾಕ ನಂಗಿಶ್ಟಿಲ್ಲ
ದೇಶಕ್ಕೊಬ್ರೆ ಪ್ರದಾನಿ, ರಾಜ್ಯಕ್ಕೊಬ್ರೆ ಮುಕ್ಯಮಂತ್ರಿ
ಆದ್ರು ಕರ‍್ಚುಮಾಡಲ್ವೇನ್ರಿ ಅವ್ರಿಗೆ ಕೋಟಿ ಕೋಟಿ?
ಅದ್ರಲ್ಲಿ ಸ್ವಲ್ಪ ಕೊಡ್ರೋ ಯಪ್ಪಾ ನಮ್ಮ ಸಾಲಿಗೆ
ನಾನೋದಿ ತರ‍್ತೀನಿ ಕೀರ‍್ತಿ ನಮ್ಮೂರ ಕನ್ನಡ ಸಾಲಿಗೆ
(ಚಿತ್ರ ಸೆಲೆ: klp )
ಓದಿ ಕಣ್ಣಾಲಿಗಳು ತುಂಬಿ ಬಂದ್ವು. ಇದು ಗಂಬೀರ ವಿಶಯ, ಆದ್ರೆ ಒಂದು ತುಡಿತವೂ ಹೌದು. ಆ ತುಡಿತ ಈ ಕವನದಲ್ಲಿದೆ
ತುಂಬಾ ಚೆನಾಗಿದೆ
chennagide