ಮುಗಿಲು ಮುಟ್ಟಿದೆ‌ ಬಾವಗಳ ಅಟ್ಟಹಾಸ

ಯುವಾ ರಾಗವ್.

feeling, depression, ಬಾವನೆ

ಬಾವಗಳು ಬೇಗುದಿಯಲಿ ಕುದಿಯುತಿವೆ
ನಾನೇ ಒಂಟಿತನಕೆ ಮಾದರಿಯೆಂದನಿಸಿದೆ
ಬಾವವುಕ್ಕಿ ಬಂದು ಮನ ಸವಳಾಗಿರುವಾಗ
ಬಸವಳಿದ ಬಾವವು ಹೊರಬರಲೆತ್ನಿಸಿದೆ

ತುಂಟತನವು ಗಂಟಿಕ್ಕಿ ಒಂದೆಡೆ ಕೂತಿರಲು
ಬಾವಗಳಟ್ಟಹಾಸ ಮುಗಿಲು ಮುಟ್ಟಿದೆ‌
ಆನಂದಾಶ್ರುವು ಕಣ್ಣಸನಿಹದಿ ಮಾಯವಾಗಿ
ಬೇಗುದಿಯು ಜ್ವಾಲೆ ಹೊರಸೂಸಲೆತ್ನಿಸಿದೆ

ಬಾವಗಳು ದಟ್ಟತನವ ಒಟ್ಟುಗೂಡಿಸಿ
ಆನಂದದ ಕಡಲಿಗೆ ಬೇಲಿಯ ನಿರ‍್ಮಿಸಿ
ಕಟು ಬಾವದ ಬೆಟ್ಟವೇ ನಿರ‍್ಮಾಣ ಮಾಡಿರಲು
ಅಳಲುಗಳ್ ಅಳಲು ಯತ್ನಿಸಿ ಸೋತಿವೆ

ಬಾವನೆಗಳು ಹಾಲ್ಬಿಳುಪಿನ ಹೊಗೆಯಂತೆ
ಹೊಕ್ಕಿ ತೂರಲು ಬಾವವೇ ಮಾಯವಾಗಿವೆ
ಕಶ್ಟವೇನಲ್ಲ, ನಿನ್ನ ತೊರೆದು ನಡೆಯುತಿರೆ
ಬಾವಕೆ ನನ್ನಳಿದು ಹೋದಂತ ನಶ್ಟವೇನಲ್ಲ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: