ನೀ ಚಂದಿರನ ಕಾಂತಿಯಾದೆ

– ವಿನು ರವಿ.

ನನ್ನೊಳಗಿನ ನವಿರಾದ
ಬಾವಗಳಿಗೆ ನೀ
ನವಿಲಿನ ನರ‍್ತನವಾದೆ

ನನ್ನ ಗೆಳೆತನದ ಮೇರೆ
ವಿಸ್ತರಿಸಿದ ನೀ
ನೀಲ ಬಾನ ಮೇಗ ಚಿತ್ರವಾದೆ

ನನ್ನೊಳಗಿನ ಬೆಳದಿಂಗಳ
ಚೆಲುವಿಗೆ ನೀ
ಚಂದಿರನ ಕಾಂತಿಯಾದೆ

ನನ್ನೊಳಗಿನ ಮಾತುಗಳ
ಬಿದಿರಿಗೆ ನೀ
ಕೊಳಲ ಮದುರ ದನಿಯಾದೆ

ನನ್ನಾವರಿಸಿ ಬೇಸರವ ತೂರಿ
ಬಾವಗಳ ಶ್ರುಂಗರಿಸಿ ನೀ
ಸಂಬ್ರಮವಾದೆ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Ajit K says:

    ವಾಹ್! ಎಂತರ ಸುಂದರ ಕವಿತೆ..

ಅನಿಸಿಕೆ ಬರೆಯಿರಿ: