ಕವಿತೆ: ಮೌನ-ಗಾನ
– ವಿನು ರವಿ.
ಮಾತಿನೊಳಗೊಂದು
ಕಾರಣವಿರದ ಮೌನ
ಮಾಮರದ ಮರೆಯೊಲ್ಲೊಂದು
ಕೋಗಿಲೆಯ ಗಾನ
ಜಾರುವ ನೇಸರನ ನೆನಪಿಗೆ
ಚಂದಿರನ ಬೆಳದಿಂಗಳ ಚಾರಣ
ಕೆಂಪಾದ ಕದಪಿನಾ ತುಂಬಾ
ಮೂಗುತಿಯ ಹೊಳೆವ ಹೊನ್ನ ಕಿರಣ
ನೆನಪಿನಾ ಉಂಗುರದ
ತುಂಬಾ ಮುತ್ತಿನಾ ಮೋಹಕ ಬಣ್ಣ
ಇರುಳ ಏಕಾಂತದಲಿ
ಹೊಳೆವ ತಾರೆಗಳ ಗಾನ ತನನ
ಕಣ್ಣಾ ಮುಚ್ಚಾಲೆ ಆಡುವ
ಮದುರ ಬಾವಗಳ ನೂಪುರ ರಾಗದ್ಯಾನ
ಹೇಳು, ಯಾವ ಬಿಂದುವಿನಿಂದ
ಆರಂಬವಾಯಿತೀ ಸ್ನೇಹದಾ ಗಂದರ‍್ವಗಾನ
ಕೇಳುತ ಕೇಳುತ ಮೈಮರೆತು
ಮಲಗಿವೆ ಕನಸುಗಳ ಬಿನ್ನಾಣ
ತುಂಬ ಚನಾಗಿದೆ..
ಚೆನ್ನಾಗಿದೆ ?