ಕವಿತೆ: ಮೌನ-ಗಾನ

– ವಿನು ರವಿ.

ಒಂಟಿತನ, loneliness

ಮಾತಿನೊಳಗೊಂದು
ಕಾರಣವಿರದ ಮೌನ
ಮಾಮರದ ಮರೆಯೊಲ್ಲೊಂದು
ಕೋಗಿಲೆಯ ಗಾನ

ಜಾರುವ ನೇಸರನ ನೆನಪಿಗೆ
ಚಂದಿರನ ಬೆಳದಿಂಗಳ ಚಾರಣ
ಕೆಂಪಾದ ಕದಪಿನಾ ತುಂಬಾ
ಮೂಗುತಿಯ ಹೊಳೆವ ಹೊನ್ನ ಕಿರಣ

ನೆನಪಿನಾ ಉಂಗುರದ
ತುಂಬಾ ಮುತ್ತಿನಾ ಮೋಹಕ ಬಣ್ಣ
ಇರುಳ ಏಕಾಂತದಲಿ
ಹೊಳೆವ ತಾರೆಗಳ ಗಾನ ತನನ

ಕಣ್ಣಾ ಮುಚ್ಚಾಲೆ ಆಡುವ
ಮದುರ ಬಾವಗಳ ನೂಪುರ ರಾಗದ್ಯಾನ
ಹೇಳು, ಯಾವ ಬಿಂದುವಿನಿಂದ
ಆರಂಬವಾಯಿತೀ ಸ್ನೇಹದಾ ಗಂದರ‍್ವಗಾನ
ಕೇಳುತ ಕೇಳುತ ಮೈಮರೆತು
ಮಲಗಿವೆ ಕನಸುಗಳ ಬಿನ್ನಾಣ

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Sachin.H.J Jayanna says:

    ತುಂಬ ಚನಾಗಿದೆ..‌

  2. shashi kumar says:

    ಚೆನ್ನಾಗಿದೆ ?

shashi kumar ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *