ನಿಜ ದೈವ ಇವರು

– ಶಾಂತ್ ಸಂಪಿಗೆ.

ಶ್ರೀ ಶಿವಕುಮಾರ ಸ್ವಾಮಿಗಳು, Shree Shivakumara Swami

ಕರುನಾಡನು ಬೆಳಗಿದ ಶಿವ
ಇವರು ದಿವ್ಯ ಚೇತನ
ಆಚರಿಸಿದರು ಕಾಯಕ ಮಂತ್ರ
ನಿತ್ಯ ನೂತನ

ಅನಾತ ಮಕ್ಕಳ ಕಶ್ಟಕೆ
ಕರಗಿದ ಮನ
ತ್ರಿವಿದ ದಾಸೋಹ ನೀಡುತ
ಸಲಹಿತು ದಿನ

ಅಳಿಸಲು ಜಾತಿ ಮತವ
ತೊಟ್ಟರು ಪಣ
ಬಿತ್ತಿದರು ದೇಶದಿ ಬವ್ಯ
ಸಮಾನತೆಯ ಗುಣ

ಬಕ್ತಿ ಮಾರ‍್ಗದಿ ಕಟ್ಟಿದರು
ಸನ್ಮಾರ‍್ಗದ ಗಣ
ನಡೆದಾಡುವ ದೇವರ ಅನುಗ್ರಹ
ತೀರಿಸಲಾಗದ ರುಣ

ಲೋಕದ ಒಳಿತಿಗೆ ಜನಿಸಿದ
ಸಿದ್ದಗಂಗ ಶಿವ ಇವರು
ಜನ ಮಾನಸದಲ್ಲಿ ಉಳಿಯುವ
ನಿಜ ದೈವ ಇವರು

(ಚಿತ್ರ ಸೆಲೆ: newskarnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: