ಗಂಗೆಯ ಕಳಿಸು ನೆಲವ ತಣಿಸು

– ನೇತ್ರಾವತಿ ಆಲಗುಂಡಿ.

ಬರ, drought

ಬಿರುಕು ಬೂಮಿಯಲಿ ಬಿದ್ದಿರುವ ಮಣ್ಣು ನಾನು
ಜಗದೊಡೆಯ ಬೇಡುವೆನು ಹನಿ ನೀರ ಹರಿಸು
ಬಿಸಿಲಲಿ ಬವಣಿದ ಬಂಜರು ಬೂಮಿ ನಾನು
ದಯೆ ತೋರು ಒಡೆಯ ಗಂಗೆಯ ಕಳಿಸು ನೆಲವ ತಣಿಸು

ಕಂದಮ್ಮಗಳ ಕಂಗಳಲಿ ರಕುತದಾರೆ
ಹೆತ್ತವರ ಒಡಲಲ್ಲಿ ಕಿಚ್ಚಿನ ಉರಿ
ಕೇಳಿಸದೇ ಸಾವಿನ ಮನೆಯ ಕೂಗು
ಇನ್ನೆಶ್ಟು ಕಾದು ನೋಡುವೆ ಜನರ ನರಳಾಟ
ಗಂಗೆಯ ಕಳಿಸು ನೆಲವ ತಣಿಸು

ದೇಹಗಳು ಉರಳುತಿವೆ ದಿನಗಳು ಕಳೆಯುತಿರೆ
ಕಣ್ಣೀರ ಹಾಕಲು ಜನರ ತೊಳಲಾಟ
ಗಾಳಿಗಂಜಿ ಜಲವ ಬಯಸಿ ಬದುಕವ ಜೀವಗಳಿವೆ
ಎಲ್ಲರ ಉಸಿರ ನಿಲ್ಲುವ ಮುನ್ನ ದರೆಗೆ ಬಾರೋ
ಗಂಗೆಯ ಕಳಿಸು ನೆಲವ ತಣಿಸು

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: