ಮಾಡಿ ನೋಡಿ: ಅಲೆಪಾಕ್

– ಸವಿತಾ.

alepak, ಅಲೆಪಾಕ್

ಬೇಕಾಗುವ ಸಾಮಾನುಗಳು

 • ಪೇಪರ್ ಅವಲಕ್ಕಿ – 3 ಬಟ್ಟಲು
 • ಹಸಿ ಕೊಬ್ಬರಿ ತುರಿ – 2 1/4 ಬಟ್ಟಲು
 • ಹಸಿ ಶುಂಟಿ – 4 ಇಂಚು
 • ಹುರಿಗಡಲೆ ಪುಡಿ – 3/4 ಬಟ್ಟಲು
 • ಕಡಲೇ ಬೀಜ – 1/2 ಬಟ್ಟಲು
 • ಕೊತ್ತಂಬರಿ ಸೊಪ್ಪು – 1/2 ಬಟ್ಟಲು
 • ಕರಿಬೇವು – 10 ಎಲೆ
 • ಹಸಿ ಮೆಣಸಿನಕಾಯಿ – 6
 • ನಿಂಬೆ ರಸ – 1/2 ಹೋಳು
 • ಸಕ್ಕರೆ – 1 ಚಮಚ
 • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ತೆಳುವಾದ ಪೇಪರ್ ಅವಲಕ್ಕಿ ಮತ್ತು ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಹಸಿ ಶುಂಟಿ ಸಿಪ್ಪೆ ತೆಗೆದು, ಸುಮಾರು ಒಂದು ಇಂಚು ಉದ್ದದ ಹೋಳುಗಳಾಗಿ ಕತ್ತರಿಸಿಟ್ಟುಕೊಳ್ಳಿ. ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು, ಬೇಳೆ ಮಾಡಿ ಇಟ್ಟುಕೊಳ್ಳಿ. ಹುರಿಗಡಲೆ ಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಉಪ್ಪು, ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ, ಸಣ್ಣ ಸಣ್ಣ ಉಂಡೆ ಕಟ್ಟಿ ಇಡಿ.

ಉಂಡೆ ಒಡೆದು ಅವಲಕ್ಕಿಯಲ್ಲಿ ಹಾಕಿ ಚೆನ್ನಾಗಿ ಕಲಸಿದರೆ ಸವಿಯಲು ತಯಾರು. ಬೆಳಗಾವಿ ಜಿಲ್ಲೆಯಲ್ಲಿ ಅಲೆಪಾಕ್ ಜೊತೆಗೆ ಕಬ್ಬಿನ ಹಾಲು ಕುಡಿಯುವುದು ರೂಡಿಯಿದೆ.

ಅಲೆಪಾಕ್ ಆರೋಗ್ಯಕ್ಕೆ ಒಳ್ಳೆಯದು ಅಂತಾ ಹೇಳುತ್ತಾರೆ. ಕಪ-ಕೆಮ್ಮು ಕಡಿಮೆ ಆಗುವುದು ಅಲ್ಲದೇ ಗಂಟಲು ಕಟ್ಟಿದಾಗ ಇದು ತುಂಬಾ ಒಳ್ಳೆಯದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: