ಕವಿತೆ: ಮನ್ವಂತರದ ಗುರಿ

– ಅಶೋಕ ಪ. ಹೊನಕೇರಿ.

ಓಟ, Race

ಗರ‍್ಬದೊಳು ಮೊಳಕೆಯೊಡೆದ
ಕೂಸೊಂದು ಹೊಸ ಆಸೆಗಳ
ಹೊತ್ತು ದರೆಗಿಳಿಯಲು ನವ
ಮಾಸದ ತಾಳ್ಮೆಯೇ ಬೇಕು

ಮನದೊಳರಳಿದ ಗುರಿಯೊಂದು
ಮಾಗಿ ಯೋಜನಗಿಳಿದು
ಪಲ ಕೊಡುವುದು ಹೊತ್ತು
ಹುಟ್ಟಿ, ಹೊತ್ತು ಕಂತಿದಶ್ಟು
ಅಂತರದಲ್ಲಿ ಸಾದ್ಯವೇ ಇಲ್ಲ

ಬಿಡದ ಚಲದಲ್ಲಿ ಗುರಿಯೆಡೆಗೆ
ಇಡುವ ಹೆಜ್ಜೆಗೆ ಬಲು
ಎಡರು ತೊಡರುಗಳುಂಟು
ನೂರೆಂಟು ವಿಗ್ನಗಳುಂಟು

ಗುರಿಯೆಡೆಗಿನ ಏರುವ
ಒಂದೊಂದು ಮೆಟ್ಟಿಲುಗಳಿಗೆ
ಮನ್ವಂತರಗಳೆ ಕಳೆಯುತ್ತವೆ
ತಾಳ್ಮೆ ಕಳೆದುಕೊಳ್ಳದಿರು
ಮನವೇ, ಚಲ ಬಿಡದಿರು

ನಡೆ ನಿದಾನ… ಏರು ದುರ‍್ಲಬ
ಪ್ರತಿಕ್ಶಣದ ಕ್ರಿಯೆಗೆ ಏದುಸಿರ
ಕಲರವ… ಆದರೂ
ಬಿಡದ ಚಲ ಅಚಲ
ಆತ್ಮ ವಿಶ್ವಾಸ
ಗುರಿಯೆಡಗಿನ ಏರು
ನಡೆಗೆ ನೋವೊಳಗಿನ
ನಲಿವಿನಂತೆ
ಸುಕ ನೀಡುತ್ತಿದೆ
ಇಂಚಿಂಚು ಜಗವೇ ಗೆದ್ದಶ್ಟು
ಸಂತೋಶ ತರುತ್ತಿದೆ

ಗುರಿಯೆಡಗಿನ ಇನ್ನೊಂದೇ
ಒಂದು… ಏರು ಹೆಜ್ಜೆಗೆ
ಕ್ಶಣಗಣನೆ ಶುರುವಾಗಿದೆ
ಮತ್ತು ಗೆಲುವಿನ ಹರುಶದ
ಆಚರಣೆಗೆ ಇಡಿ ವಿಶ್ವವೇ
ಶ್ರುಂಗರಿಸಿ ನಿಂತಿದೆ

ಗುರಿಯ ಸಾದನೆಯ
ಗೆಲುವಿನ ದಿನವನ್ನು
ಮುಂಬರುವ ಮನ್ವಂತರಗಳು
ಸುವರ‍್ಣಾಕ್ಶರಗಳಲ್ಲಿ
ಬರೆದಿಟ್ಟುಕೊಳ್ಳುತ್ತವೆ ಮತ್ತು
ನಾನು ಸಾದಿಸಿದ ಸಾದನೆ
ಅಜರಾಮರವಾಗಿರುತ್ತದೆ
ನಾನು ಸಾದಿಸಿದ ಸಾದನೆ
ಅಜರಾಮರವಾಗಿರುತ್ತದೆ

(ಚಿತ್ರ ಸೆಲೆ : pixabay.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.