ಹನಿಗವನಗಳು

– ವೆಂಕಟೇಶ ಚಾಗಿ.

*** ದೂರ ***

ಬಂದುಗಳ ಬೆರೆಯಲೊಂದು ಹಬ್ಬವಿರಲು
ಗೆಳೆಯರ ಕರೆಯಲೊಂದು ನೆಪ ಇರಲು
ಇರುವುದೆಲ್ಲವ ಬಿಟ್ಟು ಸಮಯ ಕಾಯ್ದರೆ
ಕಾಲಡಿಯ ಗರಿಕೆಯೂ ದೂರ ಮುದ್ದು ಮನಸೆ

*** ಹೂ ***

ಕೊಂಕು ಮಾತುಗಳ ಕೇಳಿ ಮಂಕಾಗುವುದೇ
ಬಿಂಕಬಿನ್ನಾಣಗಳ ಕಂಡು ಮುದುಡುವುದೇ
ಪಡೆದ ಪಲಗಳಲಿ ಬೆಳೆದು ಅರಳುವ ಹೂ
ಪಾಟವಾಗದೇ ಇರದೆಮಗೆ ಮುದ್ದುಮನಸೆ

*** ನದಿ ***

ಹರಿಯುವ ನದಿಗೆ ದಿಕ್ಕು ತೋರುವವರಾರು
ಸುಳಿಯುವ ಗಾಳಿಯನು ನಿಲ್ಲಿಸುವವರಾರು
ಯಾರಿಗೂ ಕಾಯದಿರು ಯಾರನೂ ತಡೆಯದಿರು
ಹರಿಯುತಿರು ನದಿಯಂತೆ ಮುದ್ದು ಮನಸೆ

*** ಮದ್ದು ***

ದರೆಯನ್ನೆಲ್ಲಾ ಉತ್ತಿದರೂ ಬಡತನ ನೀಗದು
ಜಾತಿಗಳೆಲ್ಲಾ ಅಳಿದರೂ ಸ್ವಾರ‍್ತ ತೀರದು
ಆರುಗಳು ಮನದಲ್ಲೇ ಹುಟ್ಟಿ ಬೆಳೆಯುತಿರಲು
ಬುದ್ದಿಗಶ್ಟು ಮದ್ದು ನೀಡು ಮುದ್ದು ಮನಸೆ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks