ಕವಿತೆ : ವರುಶದಂಚಿಗೊಂದು ಪರೀಕ್ಶೆ

ವೆಂಕಟೇಶ ಚಾಗಿ.

ಪರೀಕ್ಶೆ, Exam

ವರುಶದಂಚಿಗೊಂದು ಪರೀಕ್ಶೆ
ಬಂತು ಮಕ್ಕಳಿಗೆ ಈಗ
ವರುಶವೆಲ್ಲ ಕಲಿತ ವಿಶಯಗಳಿಗೆ
ಸಿದ್ದಗೊಳ್ಳಬೇಕು ಬೇಗ ಬೇಗ

ಮನದಲ್ಲಿ ಬಯವೇಕೆ
ಮನನ ಮಾಡಿಕೊಳ್ಳಿ ಇಂದೆ
ತಿಳಿಯದಂತ ವಿಶಯಗಳನು
ಕೇಳಿ ತಿಳಿದುಕೊಳ್ಳಿ ಇಂದೆ

ಬೇಗ ಮಲಗಿ ಬೇಗ ಎದ್ದು
ಓದಿಕೊಳ್ಳಿ ಅರಿತುಕೊಳ್ಳಿ
ಕಾಲಹರಣ ಮಾಡದಂತೆ
ಗೆಳೆಯರೊಡನೆ ಹಂಚಿಕೊಳ್ಳಿ

ನಿಮ್ಮ ಗಳಿಕೆ ನಿಮ್ಮ ಏಳ್ಗೆ
ತಂದೆ ತಾಯಿ ಆಶಯ
ನಡೆನುಡಿಗಳು ಅಬ್ಯಾಸವು
ತರದಿರಲಿ ಸಂಶಯ

ಜೀವನದಿ ಪ್ರಮುಕ ಗಟ್ಟ
ವಿದ್ಯಾರ‍್ತಿಯ ಜೀವನವು
ಯಶ ತರಲಿ ಶುಬವಾಗಲಿ
ಪರೀಕ್ಶೆಯೆಂಬ ತಿರುವು

( ಚಿತ್ರ: thejackpetcheyfoundation.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications