ಮಕ್ಕಳ ಕವಿತೆ: ಗಾಳಿಪಟ

– ವೆಂಕಟೇಶ ಚಾಗಿ.

kite, ಗಾಳಿಪಟ

ಗಾಳಿಯಲ್ಲಿ ಹಾರಾಡುತಿದೆ
ನಾನು ಮಾಡಿದ ಗಾಳಿಪಟ
ಉದ್ದನೆ ಬಾಲಂಗೋಸಿ ಕೆಳಗೆ
ಹಾರಿದೆ ಬಾನಲಿ ಪಟಪಟ

ಮೇಲೆ ಹೋಗಿ ಲಾಗಹೊಡೆದು
ಮತ್ತೆ ಏರಿದೆ ನನ್ನ ಪಟ
ಗಾಳಿಯ ರಬಸ ಲೆಕ್ಕಿಸದೆ
ಹಾರಿದೆ ನೋಡಿರಿ ಗಾಳಿಪಟ

ಊರಿನ ಮಕ್ಕಳು ನೋಡಲು ಬಂದರು
ಬಣ್ಣದ ನನ್ನಯ ಗಾಳಿಪಟ
ಎಲ್ಲರ ನಗಿಸುತ ಸದ್ದುಮಾಡಿ
ಹಾರಿದೆ ಬಾನಲಿ ಚಟಪಟ

ದಾರವ ಬಿಟ್ಟರೆ ದೂರ ಹೋಗುವ
ಓಟಗಾರನು ನನ್ನ ಪಟ
ಹಕ್ಕಿಗಳೆಲ್ಲ ನೋಡುತ್ತ ನಿಂತಿವೆ
ಹಾರುವ ನನ್ನಯ ಗಾಳಿಪಟ

ಯಾರಿಗೆ ಹೆದರದೆ ಮೇಲಕ್ಕೆ ಏರಿದೆ
ದೈರ‍್ಯವಂತನು ಗಾಳಿಪಟ
ಮೇಲಕೆ ಏರಲು ದೈರ‍್ಯ ಇರಲಿ
ಪಾಟವ ಹೇಳಿದೆ ಗಾಳಿಪಟ

(ಚಿತ್ರ ಸೆಲೆ: freesvg.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: