ಕವಿತೆ : ಗುರು ಎಂದರೆ…

ವಿನು ರವಿ.

ಗುರು-ಶಿಶ್ಯ, Teacher-Student

ಆತ್ಮ ವಿಕಾಸದ ಹಾದಿಯಲಿ
ಹೊಸತನದ ಹಂಬಲಗಳಿಗೆ
ನವ ಚೈತನ್ಯ ತುಂಬುವ ದಿವ್ಯ ಶಕ್ತಿ

ಸುಳ್ಳು ಪೊಳ್ಳುಗಳ ಕಳಚಿ
ಬ್ರಮೆಯ ಬಲೆಗಳನು ಬಿಡಿಸಿ
ಅಂದಕಾರವ ದೂರ ಮಾಡುವ ಅನನ್ಯ ಶಕ್ತಿ

ಬೂತ ವರ‍್ತಮಾನದೊಳಗೆ
ಒಳಿತು ಕೆಡಕುಗಳ ಕಡೆಗೆ
ಬೆರಳಿಡಿದು ತೋರಿಸುವ ಸ್ಪೂರ‍್ತಿ ಶಕ್ತಿ

ಅಸ್ಪಶ್ಟ ಚಿಂತನಗಳಿಗೆ
ಸ್ಪಶ್ಟ ಕನ್ನಡಿಯಾಗಿ
ಅನಂತ ಗಮ್ಯತೆಯ ಕಡೆಗೆ ನಡೆಸುವ ಆದಾರ ಶಕ್ತಿ

ಅಂತರಂಗದ ಪ್ರಶ್ನೆಗಳಿಗೆ
ಬದುಕೊಡ್ಡುವ ಸವಾಲುಗಳಿಗೆ
ಬರವಸೆಯ ದೀಪವಾಗುವ ಮೇರು ಶಕ್ತಿ

( ಚಿತ್ರಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. sindhu achar says:

    ಗುರುವಿನ ಬಗ್ಗೆ ನಿಮ್ಮ ಬರಹ ಮನಮುಟ್ಟಿದೆ, ಅಭಿನಂದನೆಗಳು

ಅನಿಸಿಕೆ ಬರೆಯಿರಿ: