ಕವಿತೆ : ಗುರು ಎಂದರೆ…
– ವಿನು ರವಿ.
ಆತ್ಮ ವಿಕಾಸದ ಹಾದಿಯಲಿ
ಹೊಸತನದ ಹಂಬಲಗಳಿಗೆ
ನವ ಚೈತನ್ಯ ತುಂಬುವ ದಿವ್ಯ ಶಕ್ತಿ
ಸುಳ್ಳು ಪೊಳ್ಳುಗಳ ಕಳಚಿ
ಬ್ರಮೆಯ ಬಲೆಗಳನು ಬಿಡಿಸಿ
ಅಂದಕಾರವ ದೂರ ಮಾಡುವ ಅನನ್ಯ ಶಕ್ತಿ
ಬೂತ ವರ‍್ತಮಾನದೊಳಗೆ
ಒಳಿತು ಕೆಡಕುಗಳ ಕಡೆಗೆ
ಬೆರಳಿಡಿದು ತೋರಿಸುವ ಸ್ಪೂರ‍್ತಿ ಶಕ್ತಿ
ಅಸ್ಪಶ್ಟ ಚಿಂತನಗಳಿಗೆ
ಸ್ಪಶ್ಟ ಕನ್ನಡಿಯಾಗಿ
ಅನಂತ ಗಮ್ಯತೆಯ ಕಡೆಗೆ ನಡೆಸುವ ಆದಾರ ಶಕ್ತಿ
ಅಂತರಂಗದ ಪ್ರಶ್ನೆಗಳಿಗೆ
ಬದುಕೊಡ್ಡುವ ಸವಾಲುಗಳಿಗೆ
ಬರವಸೆಯ ದೀಪವಾಗುವ ಮೇರು ಶಕ್ತಿ
( ಚಿತ್ರಸೆಲೆ : wikipedia )
ಗುರುವಿನ ಬಗ್ಗೆ ನಿಮ್ಮ ಬರಹ ಮನಮುಟ್ಟಿದೆ, ಅಭಿನಂದನೆಗಳು