ಮಾವಿನಕಾಯಿ ಚಿತ್ರಾನ್ನ
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ – 1 ಬಟ್ಟಲು
- ಕಡಲೇ ಬೇಳೆ – 1 ಚಮಚ
- ಉದ್ದಿನ ಬೇಳೆ – 1 ಚಮಚ
- ಕಡಲೆಬೀಜ – 4 ಚಮಚ
- ಸಾಸಿವೆ – 1/2 ಚಮಚ
- ಕರಿಬೇವು – 10 ಎಲೆ
- ಎಣ್ಣೆ – 1 ಬಟ್ಟಲು ಎಣ್ಣೆ
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ – ಸ್ವಲ್ಪ
- ಇಂಗು – ಸ್ವಲ್ಪ
- ಮಾವಿನಕಾಯಿ ತುರಿ – 1 ಬಟ್ಟಲು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಒಣ ಕೊಬ್ಬರಿ ತುರಿ – 1 ಬಟ್ಟಲು
- ಮೆಂತೆ ಕಾಳು – 1 ಚಮಚ
- ದಾಲ್ಚಿನ್ನಿ (ಚಕ್ಕೆ) – 1/2 ಇಂಚು
- ಏಲಕ್ಕಿ – 1
- ಒಣ ಮೆಣಸಿನ ಕಾಯಿ – 4
ಮಾಡುವ ಬಗೆ
ಅನ್ನ ಮಾಡಿ ಇಟ್ಟುಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಒಣ ಕೊಬ್ಬರಿ ತುರಿ, ಮೆಂತೆ ಕಾಳು, ಚಕ್ಕೆ, ಏಲಕ್ಕಿ, ಒಣ ಮೆಣಸಿನ ಕಾಯಿ ಸ್ವಲ್ಪ ಹುರಿದು ಮಿಕ್ಸರ್ ನಲ್ಲಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಮಾವಿನಕಾಯಿ ತೊಳೆದು ತುರಿದು ಇಟ್ಟುಕೊಳ್ಳಿ.
ಎಣ್ಣೆ ಬಿಸಿ ಮಾಡಿ ಮೊದಲು ಸಾಸಿವೆ, ಇಂಗು, ಕಡಲೇ ಬೇಳೆ, ಉದ್ದಿನ ಬೇಳೆ, ಕಡಲೆಬೀಜ, ಕರಿಬೇವು ಹಾಕಿ ಚೆನ್ನಾಗಿ ಹುರಿದು ಒಗ್ಗರಣೆ ಮಾಡಿ. ನಂತರ ಮಾಡಿಟ್ಟ ಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ. ಉಪ್ಪು, ಅರಿಶಿಣ ಪುಡಿ ಹಾಕಿ ಚೆನ್ನಾಗಿ ಕಲಸಿ ಒಲೆ ಆರಿಸಿ. ಈಗ ಮಾವಿನಕಾಯಿ ತುರಿ ಸೇರಿಸಿ ಚೆನ್ನಾಗಿ ಕಲಸಿ. ಮಾಡಿಟ್ಟ ಅನ್ನ ಸೇರಿಸಿ, ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಈಗ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು