ಗೋದಿ ಹಲ್ವಾ
– ಸವಿತಾ.
ಬೇಕಾಗುವ ಸಾಮಾನುಗಳು
- ಹಾಲು – 1 ಲೀಟರ್
- ಗೋದಿ ಹಿಟ್ಟು – 2 ಲೋಟ
- ಬೆಲ್ಲದ ಪುಡಿ – 1 ಲೋಟ
- ತುಪ್ಪ – 1 ಲೋಟ
- ಏಲಕ್ಕಿ – 2
ಮಾಡುವ ಬಗೆ
ಹಾಲು ಕಾಯಿಸಿ ನಿಂಬೆ ರಸ ಸೇರಿಸಿ ಹಾಲು ಒಡೆಯಿಸಿ. ನಂತರ ತಣ್ಣೀರು ಸೇರಿಸಿ ನೀರು ಬಸಿದು ಬಟ್ಟೆಯಲ್ಲಿ ಹಿಂಡಿ ಪನ್ನೀರ್ ತೆಗೆದು ಇಟ್ಟುಕೊಳ್ಳಿ.
ಅರ್ದ ಲೋಟ ತುಪ್ಪ ಹಾಕಿ ಗೋದಿ ಹಿಟ್ಟು ಚೆನ್ನಾಗಿ ಹುರಿಯಿರಿ. ಗೋದಿ ಹಿಟ್ಟಿಗೆ, ಪನ್ನೀರ್ ಸೇರಿಸಿ ಚೆನ್ನಾಗಿ ಹುರಿಯಿರಿ. ಅರ್ದ ಲೋಟ ತುಪ್ಪ ಹಾಕಿ, ಬೆಲ್ಲ, ನೀರು ಸೇರಿಸಿ ಚೆನ್ನಾಗಿ ತಿರುಗಿಸಿ. ಬೆಲ್ಲ ಕರಗಿ ಚೆನ್ನಾಗಿ ಹೊಂದುವಂತೆ ಆದಾಗ ಒಲೆ ಆರಿಸಿ. ಏಲಕ್ಕಿ, ಪುಡಿ ಮಾಡಿ ಹಾಕಿ ಕಲಸಿ. ಬೇಕಾದರೆ ಬಾದಾಮಿ, ಗೋಡಂಬಿ ಚೂರು ಹಾಕಿಕೊಳ್ಳಿ. ಈಗ ಗೋದಿ ಹಲ್ವಾ ತಯಾರು. ಉಂಡೆ ಮಾಡಿ ಇಲ್ಲವೇ ಹಾಗೆಯೇ ಸವಿಯಲು ಕೊಡಿ.
ಇತ್ತೀಚಿನ ಅನಿಸಿಕೆಗಳು