ಕವಿತೆ: ಹೊಸ ವರುಶದ ಸ್ವಾಗತ

– ಚಂದನ (ಚಂದ್ರಶೇಕರ.ದ.ನವಲಗುಂದ).

ಹೊಸ ವರುಶ, new year

ಈಗಶ್ಟೇ ಜಾರಿದೆ ಅಂಕದ ಪರದೆ
ಹೊಸತಾಗಿ ಪ್ರಾರಂಬಿಸಿದ್ದ ನಾಟಕದ ಪಾತ್ರಗಳು
ಇದೀಗ ಮಾಸಿದಂತೆ ಕಾಣುತ್ತಿವೆ

ನೋವೋ, ನಲಿವೋ, ನಗುವೋ, ಅಳುವೋ,
ಸುಕವೋ, ದುಕ್ಕವೋ, ಹಿತವೋ, ಅಹಿತವೋ
ಕಳೆದು ಹೋಗಿದೆ ಜೀವನದೊಂದು ವರುಶ

ಕೆಲವರು ಕಳೆದ ವರುಶದ ಅಮಲಿನಲ್ಲೆ
ಕನಸು ಕಾಣುತಿಹರು, ಹಲವರು ಹೊಸ ವರುಶದ
ಚಿಗುರು ಕಾಣುವ ತವಕದಲಿ ಹೊಸ ಚಿಂತನೆಯಲಿಹರು

ಕಳೆದುಹೋಗಿದ್ದೆಶ್ಟೋ, ಸೋತದ್ದೆಶ್ಟೋ, ಗೆದ್ದದ್ದೆಶ್ಟೊ
ಇದೀಗ ಬಂದಿರುವ ವರುಶವನು ಸ್ವಾಗತಿಸೋಣ
ಸಮಯದ ಮೌಲ್ಯವರಿತು ಮುನ್ನಡೆಯೋಣ

ಹಸನಾಗಿ, ಸವಿಯಾಗಿ ಉಳಿದ ಬದುಕನ್ನು ಅನುಬವಿಸೋಣ,
ಹರುಶದಿಂದ ಹೊಸವರುಶಕೆ ಕಾಲಿಡೋಣ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. chandrakanth patil says:

    ಸರ್, ನಿಮ್ಮ ಕವಿತೆ ಬದುಕಿನ ಭರವಸೆಯಾಗಿದೆ, ಶುಭೋದಯ.

ಅನಿಸಿಕೆ ಬರೆಯಿರಿ:

Enable Notifications OK No thanks