ಕವಿತೆ: ಎಲ್ಲೆಲ್ಲೂ ಬಣ್ಣ

– ವಿನು ರವಿ.

ಬಣ್ಣ

ಎಲ್ಲೆಲ್ಲೂ ಬಣ್ಣಾ ಬಣ್ಣಾ
ಇದು ಕಾಮನ ಓಕುಳಿಯಣ್ಣ
ಪಲ್ಲವಿಸಿದೆ ವಸಂತನೊರೆದ
ಕವಿತೆಯ ಚಂದದ ಬಣ್ಣ

ದುಂಬಿಯ ಕಣ್ಣಲಿ
ತರತರದ ಹೂವಿನ ಬಣ್ಣ
ಕಡಲ ಕನ್ನಡಿಯಲಿ
ಮುಗಿಲ ನೀಲಿಬಣ್ಣ

ಚಿಗುರು ಚಿಗುರೊಳಗು
ಕೋಗಿಲೆಯ ಇನಿದನಿ ಬಣ್ಣ
ಹರಿವ ನೀರೊಳಗೂ
ಹಸಿರ ಕಂಪಿನ ಬಣ್ಣ

ತಾರುಣ್ಯದ ಹೊಳಪಲ್ಲಿ
ಪ್ರೀತಿಯ ಮೋಹಕ ಬಣ್ಣ
ಜೀವನವೇ ಕಪ್ಪು ಬಿಳುಪಿನ ಬಣ್ಣ
ಅದರೊಳಗೆ ತೂಗುತಿವೆ
ಸುಂದರ ಬಾವ ಕುಸುಮಗಳ ಬಣ್ಣ

( ಚಿತ್ರಸೆಲೆ: mepixels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: