ಕವಿತೆ: ಕಾಣದ ಕನಸು

– ಶ್ವೇತ ಪಿ.ಟಿ.

life ahead

ಕಾಣದ ಕನಸು ಕಾಡಿದೆ ಮನದಲಿ
ಕಾಡಿಸಿ ಪೀಡಿಸಿ ಮನವನು ಕದಲಿಸಿ
ಮೋಡಿಯ ಮಾಡಿ ಚತುರತೆ ತೋರಿಸಿ
ದಾರಿಯ ತಪ್ಪಿಸಿ ತನ್ನೆಡೆ ಸೆಳೆದಿದೆ

ಬೇಡದ ಮಾತಿಗೆ ಗಮನವ ಹೆಚ್ಚಿಸಿ
ಕುಶಿಯನು ಕರಗಿಸಿ ಕೊರಗನು ತುಂಬಿಸಿ
ಇಲ್ಲದ ಸಲ್ಲದ ಬಯವನು ಹುಟ್ಟಿಸಿ
ಮೆರೆದಿದೆ ಜಯದೀ ನಗೆ ಬೀರುತಲಿ

ನಡೆ ನೀ ನಡೆ, ನೀ ಸರಿ ದಾರಿಯಲಿ
ದಿಟ್ಟ ದ್ರುಶ್ಟಿಯ ಗುರಿಯೆಡೆ ನೆಟ್ಟಿಸಿ
ಬಾಡಿದ ಮೊಗದಲಿ ನಗುವನು ಚಿಮ್ಮಿಸಿ
ಬೆಳಗಿಸು ಮಿನುಗಿಸು ಜೀವನ ಜ್ಯೋತಿ

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Manjunath says:

    Very nice one

  2. Raghuramu N.V. says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications OK No thanks