ರಸರುಶಿ

– ಮಹೇಶ ಸಿ. ಸಿ.

ಕುವೆಂಪು, kuvempu

ಕವಿ ನಿಮ್ಮ ವಿದ್ಯೆಯ
ಅನುಬವಕ್ಕೆ ಎಣೆಯಿಲ್ಲ
ರಾಶ್ಟ್ರ ಕಂಡ ದೀಮಂತರು
ನಿಮಗಾರು ಸಾಟಿಯಿಲ್ಲ

ಪ್ರಕ್ರುತಿಯ ಒಡಲಿನಲ್ಲಿ
ಬಳಸಿ ಬನ್ನಿ ಸುಮ್ಮನೆ
ನೋಡುವುದೇ ಪುಣ್ಯವಂತೆ
ಕವಿಗಳಾ ಮಹಾಮನೆ

ಎಣ್ಣೆ ದೀಪವಿಲ್ಲದೆ
ಪ್ರಕಾಶಮಾನವಾಗಿ ಬೆಳಗೊ
ಜ್ನಾನದ ಬೆಳಕ ಹಚ್ಚಿ
ಬೆಳಗುತಿದೆ ಕಾವ್ಯರಾಶಿ

ಶ್ರೇಶ್ಟತೆಯ ಹೊಳಪನೀವ
ರಾಮ ಚರಿತೆಯ ಸಾರೋ
ಮಹಾಕಾವ್ಯ ರಚಿತರೆ
ನಿಮಗಿದೋ ವಂದನೆ

ಮೆರೆದಿಹವು ಉತ್ತುಂಗದಿ
ಕಾವ್ಯಗಳ ಬವ್ಯತೆ
ಗಳಿಸಿದರು ಕವಿಗಳು
ಬವ್ಯ ರಾಶ್ಟ್ರ ಶ್ರೇಶ್ಟತೆ.

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: