ಕವಿತೆ: ಎಳೆಯ ಮನಸು

– ಮಹೇಶ ಸಿ. ಸಿ.

ಎಳೆಯ ಈ ಮನಸು
ಸೊರಗುತಿದೆ ದುಕ್ಕದಲಿ
ಕರಗುತಿದೆ ಕನಸು
ಬಾಳಿನ ನೋವಿನಲಿ

ಜೀವನದ ಬಂಡಿಯ ಬಗ್ಗೆ
ಎನಗೇನು ತಿಳಿದಿಲ್ಲ
ಕಶ್ಟ ಸುಕಗಳ ಬಗ್ಗೆ
ಎಳ್ಳಶ್ಟೂ ಅರಿವಿಲ್ಲ

ನಿತ್ಯದ ಕೂಳಿಗೂ
ಪರದಾಟ ತಪ್ಪಿಲ್ಲ
ಹುಟ್ಟಿಹೆನು ನಾನು ಬಡವಳಾಗಿ
ಬುವಿಗೆ ಬಾರವಾಗಿ

ಕಾಯಕದಿ ನಮಗೆಲ್ಲಾ
ಅನ್ನವನು ನೀಡುವ
ಕೈ ಹಿಡಿದು ನಡೆಸಲು
ಬಗವಂತನು ಇರುವ

ಕೊಳ್ಳಿರಿ ಎಲ್ಲರೂ
ಗಮ ಗಮಿಸುವ ಪುಶ್ಪವು
ಮುಡಿಗೆ ಬೇಕೆ, ಗುಡಿಗೆ ಬೇಕೆ
ಬಗೆ ಬಗೆಯ ಕುಸುಮವು

ಹೂವು ಮಾರೋ ಕೆಲಸವೂ
ನನ್ನ ನಿತ್ಯ ಕಾಯಕವು
ಉಳ್ಳವರು ಕೊಂಡರೆ
ತುಂಬಿದಂತೆ ತುತ್ತಿನ ಚೀಲವು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: