ಮಾಡಿ ನೋಡಿ ಕೋಳಿ ಕಬಾಬ್

– ಕಿಶೋರ್ ಕುಮಾರ್.

ಏನೇನು ಬೇಕು

  • ಕೋಳಿ ಮಾಂಸ – ½ ಕೆ.ಜಿ
  • ಕಬಾಬ್ ಪುಡಿ – 1 ಸಣ್ಣ ಪೊಟ್ಟಣ
  • ಮೊಟ್ಟೆ – 1
  • ಒಣ ಮೆಣಸಿನಕಾಯಿ ಪುಡಿ
  • ಅರಿಶಿಣದ ಪುಡಿ
  • ಶುಂಟಿ ಬೆಳ್ಳುಳಿ ಪೇಸ್ಟ್
  • ಕರಿಯಲು ಅಡುಗೆ ಎಣ್ಣೆ

ಮಾಡುವ ಬಗೆ

½ ಚಮಚ ಅರಿಶಿಣದ ಪುಡಿ ಹಾಕಿಕೊಂಡು ಕೋಳಿ ಬಾಡನ್ನು ತೊಳೆದಿಟ್ಟುಕೊಳ್ಳಿ. ಒಂದು ಪಾತ್ರೆಗೆ ಕಬಾಬ್ ಪುಡಿ, 2 ಚಮಚ ಶುಂಟಿ ಬೆಳ್ಳುಳಿ ಪೇಸ್ಟ್, ½ ಚಮಚ ಒಣ ಮೆಣಸಿನಕಾಯಿ ಪುಡಿ ಹಾಕಿ, ಇದಕ್ಕೆ ಹಸಿ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದಿಟ್ಟಿರುವ ಕೋಳಿ ಬಾಡನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಕಲಸಿ, 2 ಗಂಟೆ ನೆನೆಯಲು ಬಿಡಿ.

ಒಂದು ಬಾಣಲೆಗೆ ಅಡುಗೆ ಎಣ್ಣೆ ಸೇರಿಸಿ ಎಣ್ಣೆಯನ್ನು ಕುದಿಸಿ. ನೆನೆಸಿಟ್ಟ ಕೋಳಿ ಬಾಡನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕರಿಯಿರಿ. ಈಗ ಗರಿಗರಿಯಾದ ಕೋಳಿ ಕಬಾಬ್ ಸವಿಯಲು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks