ಮಕ್ಕಳ ಕವಿತೆ: ನಾನು

ಹರೀಶ್ ನಾಯಕ್, ಕಾಸರಗೋಡು.

ಮೋಡ ಮುಸುಕಿತು
ಗಾಳಿ ಬೀಸಿತು
ಮಳೆಯು ಸುರಿಯಿತು ಬೂಮಿಗೆ

ಮಣ್ಣು ಅರಳಿತು
ಹುಲ್ಲು ಹುಟ್ಟಿತು
ಹಚ್ಚ ಹಸುರಿದು ನಾಳೆಗೆ

ಅಮ್ಮ ಬಂದಳು
ಕೊಡೆಯ ತಂದಳು
ನಾನು ಹೊರಟೆನು ಶಾಲೆಗೆ

ತೆಂಗು ಕಂಗಿನ
ಹಸಿರು ಸಿರಿಯಲಿ
ಮುಂದೆ ನಡೆದೆನು ಬೇಗನೆ

ಶಾಲೆ ಬಂದಿತು
ಒಳಗೆ ಹೋದೆನು
ಗೆಳೆಯರೊಂದಿಗೆ ಕುಳಿತೆನು

ಓದಿ ಕಲಿತು
ಗ್ನಾನ ಪಡೆದು
ಎಲ್ಲರೊಂದಿಗೆ ಬೆಳೆದೆನು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: