ಹನಿಗವನಗಳು

– ವೆಂಕಟೇಶ ಚಾಗಿ.

***ಮಾತು***

ಎಲ್ಲ ತಿಳಿದೂ ನುಡಿದರೊಂದು ಮಾತು
ಎಲ್ಲ ಅರಿತೂ ನಡೆದರೊಂದು ಮಾತು
ಅರಿಯದಲೆ ಮಾತನಾಡುವರ ಮಾತಿಗೆ
ಕಿಂಚಿತ್ತೂ ಕಿವಿಗೊಡದಿರು ಮುದ್ದು ಮನಸೆ

***ತಬ್ಬಲಿ ಬಿರಿಯಲಿ***

ಬರುವುದೆಲ್ಲವೂ ಬರಲಿ ಜೊತೆಯಲಿರಲಿ
ಹಗಲು ಇರುಳು ಬೂಮಿಗೂ ಬಾನಿಗೂ
ಎಲ್ಲೆಡೆಯೂ ಹಬ್ಬಲಿ, ತಬ್ಬಲಿ ಬಿರಿಯಲಿ
ಮನವೆಂದೂ ನಲುಗದಿರಲಿ ಮುದ್ದು ಮನಸೆ

***ಸಂಸಾರದ ಕಣ್ಣು***

ಜೀವನದಿ ಜೊತಯಾಗಿ ನಡೆಯವಳು ಹೆಣ್ಣು
ದಣಿವರಿಯದ ಪಾತ್ರದಲಿ ಸಂಸಾರದ ಕಣ್ಣು
ಸಕಲರೂ ಅರಿತು ನಡೆದರೆ ಅವಳ ಜವಾಬ್ದಾರಿ
ಈ ಬದುಕೇ ಸ್ವರ‍್ಗವಾದೀತು ಮುದ್ದು ಮನಸೇ

***ಬದುಕಿಗೊಂದು ಅರ‍್ತ***

ಆಗಸವೇ ಮೋಡವ ಕದ್ದರೆ ಮಳೆ ಇನ್ನೆಲ್ಲಿ
ದರೆಯೇ ಬೆಳೆಯ ಮೇಯ್ದರೆ ಜೀವ ಇನ್ನೆಲ್ಲಿ
ತ್ಯಾಗದಿಂದಲೇ ಈ ಬದುಕಿಗೊಂದು ಅರ‍್ತ
ಅರ‍್ತವಿರದುದೆಲ್ಲಾ ಅನರ‍್ತ ಮುದ್ದು ಮನಸೆ

 

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications