ಆರೋಗ್ಯಕರ ಬೀಟ್‌ರೂಟ್ ಮೊಸರುಬಜ್ಜಿ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ಬೀಟ್‌ರೂಟ್ – 1
ಮೊಸರು – 1 ಬಟ್ಟಲು
ಶೇಂಗಾ ಪುಡಿ – 2-3 ಚಮಚ
ಕರಿಬೇವು – ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಇಂಗು – ಚಿಟಿಕೆ
ಸಾಸಿವೆ-ಜೀರಿಗೆ – 1 ಚಮಚ
ಎಣ್ಣೆ/ತುಪ್ಪ – ಒಗ್ಗರಣೆಗೆ

ಮಾಡುವ ಬಗೆ

ಮೊದಲಿಗೆ ಬೀಟ್‌ರೂಟ್‌ಅನ್ನು ಚೆನ್ನಾಗಿ ತೊಳೆದು, ಹಸಿಯಾಗಿಯೇ ಸಣ್ಣಗೆ ತುರಿದು ಇಟ್ಟುಕೊಳ್ಳಿ. ಇದಕ್ಕೆ ಮೊಸರು, ಶೇಂಗಾ ಪುಡಿ ಸೇರಿಸಿ ಕಲಸಿಕೊಳ್ಳಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.

ಒಂದು ಚಮಚ ಎಣ್ಣೆ ಇಲ್ಲವೇ ತುಪ್ಪ ಬಿಸಿ ಮಾಡಿ, ಇದಕ್ಕೆ ಸಾಸಿವೆ ಸೇರಿಸಿ ಸಿಡಿಯಲು ಬಿಡಿ, ಸಾಸಿವೆ ಸಿಡಿಯುತ್ತಿದ್ದಂತೆ ಜೀರಿಗೆ, ಕರಿಬೇವಿನ ಎಲೆ ಸೇರಿಸಿ. ಹೀಗೆ ತಯಾರಿಸಿದ ಒಗ್ಗರಣೆಯನ್ನು ಮೊದಲು ಕಲಸಿಟ್ಟುಕೊಂಡ ಬೀಟ್‌ರೂಟ್ ಮೊಸರಿಗೆ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಬೀಟ್‌ರೂಟ್ ಮೊಸರುಬಜ್ಜಿ ತಯಾರು. ಇದನ್ನು ಅನ್ನ, ಚಪಾತಿ ಪಲ್ಯದ ಜೊತೆ ನೆಂಚಿಕೆಯಾಗಿ ಇಲ್ಲವೇ ಹಾಗೆಯೇ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: