ಕವಿತೆ: ಬೆಳಕು
– ವೆಂಕಟೇಶ ಚಾಗಿ.
ಮತ್ತೆ
ಅದೇ ಬೆಳಕು ಮೂಡುತಿದೆ
ಇರುಳ ಪರದೆಯನು
ಸರಿಸುತಲಿ
ಅದೇ ಜೀವನವನು ಹೊಸದಾಗಿಸಿ
ಈಗ
ಯಾವುದೂ ಹೊಸತಲ್ಲ
ಆದರೂ ಬೆಳಕು
ಎಲ್ಲವನೂ ಹೊಸದಾಗಿಸಿದೆ
ಮತ್ತೆ ಮತ್ತೆ ಮಾಡುವ
ಹಳೆ ಪ್ರಯತ್ನವೆಂಬಂತೆ
ಮನದೊಳಗೂ
ಮನೆಯೊಳಗೂ
ಬೆಳಕು ಹರಡುತಲಿದೆ
ಪ್ರತಿ ಗಳಿಗೆ ಕಾಲಿಯಾದಂತೆ
ಆ
ಬಿಸಿಯ ಚೈತನ್ಯಕೆ
ಹಗುರಾದ ಮುತ್ತುಗಳಿಗೆ
ಇಗೋ
ನನ್ನ ಪ್ರಣಾಮ
ಎಲ್ಲರೂ ಎಲ್ಲವೂ ಅತ್ಯಲ್ಪ
ಈ ಜಗವೇ
ಅದ್ಬುತ ಅತ್ಯದ್ಬುತ
(ಚಿತ್ರಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು