ಮಾಡಿ ನೋಡಿ ಮಂಗಳೂರು ಬನ್ಸ್
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಪಚ್ಚ ಬಾಳೆಹಣ್ಣು – 4
- ಸಕ್ಕರೆ – 5-6 ಚಮಚ
- ಮೊಸರು – 4 ಚಮಚ
- ಜೀರಿಗೆ – 1 ಚಮಚ
- ಅಡಿಗೆ ಸೋಡ – ಸ್ವಲ್ಪ
- ಉಪ್ಪು – 1/4 ಚಮಚ
- ಮೈದಾಹಿಟ್ಟು – ಸ್ವಲ್ಪ
- ಗೋದಿ ಹಿಟ್ಟು (ಬೇಕಾದರೆ) – ಸ್ವಲ್ಪ
- ಎಣ್ಣೆ – 2 ಚಮಚ
ಮಾಡುವ ಬಗೆ:
ಮೊದಲಿಗೆ ಮಾಗಿರುವ ಬಾಳೆ ಹಣ್ಣು ಮತ್ತು ಅದಕ್ಕೆ ಸಕ್ಕರೆ ಹಾಕಿ ಕಲಸಿಕೊಳ್ಳಿರಿ. ಈಗ ಇದಕ್ಕೆ ಅರ‍್ದ ಕಪ್ ಮೊಸರು, ಸ್ವಲ್ಪ ಜೀರಿಗೆ, ಸ್ವಲ್ಪ ಅಡಿಗೆ ಸೋಡಾ ಹಾಗೂ ಒಂದು ಚಿಟಿಕೆ ಉಪ್ಪು,ಎಣ್ಣೆ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಸಿಕೊಳ್ಳಿರಿ. ಈಗ ಇದು ಸ್ವಲ್ಪ ನೊರೆ ನೊರೆ ಆಗಿ ಬರುತ್ತದೆ. ಆಗ ಇದಕ್ಕೆ ಸ್ವಲ್ಪ ಮೈದಾಹಿಟ್ಟು ಮತ್ತು ಗೋದಿ ಹಿಟ್ಟು ಹಾಕಿ ಕಲಸಿಕೊಳ್ಳಿರಿ. ಹೀಗೆ ಕಲಿಸಿಟ್ಟು ಕೊಂಡ ಹಿಟ್ಟಿಗೆ ಎಣ್ಣೆ ಸವರಿ ಏಳರಿಂದ ಎಂಟು ಗಂಟೆ ಹಾಗೆ ಬಿಡಿ. ಚಪಾತಿ ಹಿಟ್ಟಿಗಿಂತ ಇನ್ನೂ ಚೂರು ಮೆದು ಹದದಲ್ಲಿ ಕಲಸಿರಬೇಕು. ಬೆಳಿಗ್ಗೆ ಬನ್ಸ್ ಮಾಡಬೇಕೆಂದಿದ್ದಲ್ಲಿ ರಾತ್ರಿಯೇ ಹಿಟ್ಟನ್ನು ಕಲಸಿಟ್ಟುಕೊಳ್ಳಬೇಕು. ಇಗ ಹಿಟ್ಟನ್ನು ಇನ್ನೊಮ್ಮೆ ನಾದಿ, ಚಿಕ್ಕನೆ ಉಂಡೆ ಕಟ್ಟಿ, ಪೂರಿ ಗಾತ್ರಕ್ಕೆ ಒರೆದು ಎಣ್ಣೆಯಲ್ಲಿ ಕರಿಯಬೇಕು. ಈಗ ಬಿಸಿ ಬಿಸಿ ಬನ್ಸ್ ಸಿದ್ದವಿದ್ದು, ಕಾಯಿ ಚಟ್ನಿ ಇಲ್ಲವೇ ಸಾಗು ಜೊತೆ ತಿನ್ನಬಹುದು.
( ಚಿತ್ರಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು