ಕವಿತೆ: ಬಾಸ್ಕರನಿಗೆ ಸ್ವಾಗತ
– ಮಹೇಶ ಸಿ. ಸಿ.
ಜೀವರಾಶಿಯ ಬುವಿಯ
ಒಡಲ ತಬ್ಬಿದೆ ಮಂಜು
ಹಸಿರು ಹೊದಿಕೆಯ ಹೊದ್ದು
ನಗುತಲಿದೆ ಇಳೆಯು
ಚುಮು ಚುಮು ಚಳಿಯಲ್ಲಿ
ಕೆಂಬಣ್ಣದೋಕುಳಿ ಬಾನಲ್ಲಿ
ಚದುರಿ ಹೋಗಿದೆ ನಿಲ್ಲದೆ
ಗುಂಪಿನ ಮೇಗಗಳ ರಾಶಿ
ರವಿ ಕಾಣುವ ಹರುಶದಲಿ
ತಂಗಾಳಿ ಬೀಸುತಲಿದೆ ಮೆಲ್ಲನೆ
ತೂಗುತಾ ಬಾಗಿ ಬಳುಕಿವೆ
ಹೂ-ಹಣ್ಣು ಗರ‍್ಬದ ವ್ರುಕ್ಶಗಳು
ಬಾನು-ಬುವಿಯ ಬೆಸೆವಂತೆ
ನಬ ಸೇರಿವೆ ಬಾನಾಡಿಗಳು
ಪ್ರಾಣಿ-ಪಕ್ಶಿಗಳಿಂಚರದಿ
ಶ್ರವಣೇಂದ್ರಿಯ ತುಂಬಿರಲು
ಬೆಳೆದ ಪಸಲಿನ ರುಣವು
ಹಣೆಯಲ್ಲಿ ಇಹುದೇನೋ
ಕೈ ಬಿಡಳು ಬೂತಾಯಿ
ಬೆವರ ಬಸಿದ ಮಗನ
ಶುಬಗಳಿಗೆ ಬರುವುದಿದೆ
ಈ ಶುಬಕಾಲದ ದಿನದಲ್ಲಿ
ಬಾಸ್ಕರನ ಸ್ವಾಗತಿಸೇ
ನಗುಮೊಗದ ಮನದಲ್ಲಿ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು