ಜೀವನ ಪಯಣ

– ಸವಿತಾ.

ನಿನ್ನೆಯ ನೆನಪು
ನಾಳೆಯ ಕನಸು
ಇಂದಿನ ಬದುಕು
ಹೊತ್ತು ಸಾಗುವ
ಗಳಿಗೆಯಲಿ

ತಳಮಳದಲಿ ತವಕದಿ
ಏಳುಬೀಳುಗಳ
ದುಗುಡ ದುಮ್ಮಾನದಲಿ
ಎದುರಿಸುವ ಬಗೆ
ಅರಿಯದೇ ಸಾಗುತಿರಲು

ಜೀವನವೀ ಸಂಗರ‍್ಶದಿ
ಸಂಕಶ್ಟಗಳ ಸರಮಾಲೆಯಲಿ
ವಿಚಿತ್ರ ವೈಪರೀತ್ಯದಲಿ
ಗೊಂದಲಗಳ ಗೂಡಾಗಿ
ನೋವು ಅನುಬವಿಸುತಿರಲು

ಬದುಕೊಂದು ಸವಾಲಾಗಿ
ಕಶ್ಟ ಸುಕದಲಿ ನೊಂದು ಬೆಂದು
ಸಾಗರವ ಈಜಿ
ದಡ ತಲುಪುವಂತೆ
ಕಾಣುವುದು ಈ ಜೀವನ ಪಯಣ

( ಚಿತ್ರ ಸೆಲೆ: wisegeek.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *