ಹಿಂದಿನ ಸೀಟಿನ ಮೂಲಕ ಆಚೆ ಕಾಣಿಸಿದರೆ?

– ವಿವೇಕ್ ಶಂಕರ್

transparent back seat

ಕಾರನ್ನು ಹಿನ್ನಡೆಸುವಾಗ ಒಂದು ತೊಂದರೆ ಅಂದರೆ ಹಿಂದಿನ ಸೀಟು. ಓಡಿಸುಗನ (driver) ನೋಟಕ್ಕೆ ಅದು ಒಂದು ಅಡ್ಡಿ. ಆದರೆ ಕಿಯೊ ಕಲಿಕೆವೀಡಿನಲ್ಲಿ ಅರಕೆಗಾರರು ಈ ತೊಂದರೆಯನ್ನು ಬಗೆಹರಿಸುವುದಕ್ಕೆ ಹೊಸದೊಂದು ಬೆಳಕು ಚಳಕವನ್ನು ಬಯಲು ಮಾಡಿದ್ದಾರೆ. ಅದೇನೆಂದರೆ ಬೆಳಕಿನ ಮರೆಮಾಡಿಕೆ ಚಳಕ (optical camouflage technology). ಓಡಿಸುಗನಿಗೆ ಹಿಂದಿನ ಸೀಟು ಆಚೆಕಾಣುವ (transparent) ಸೀಟಾಗಿ ತೋರಿಸುವ ಹಾಗೆ ಇದು ಕೆಲಸ ಮಾಡುತ್ತದೆ.

ಹಿಂಬದಿಯಲ್ಲಿ ಎರಡು ತಿಟ್ಟುಕಗಳು (cameras) ಕಾರಿನ ಹಿಂದೆ ಏನಿದೆ ಅಂತ ಒಂದು ಅರೆಗನ್ನಡಯ ಮೇಲೆ ಹಾಕಿದ ಮೇಲೆ ಓಡುತಿಟ್ಟವನ್ನು ಯಾವ ಬಗೆಯಲ್ಲಿ ಕೆಲಸಕ್ಕೆ ಒಳಗಾಗುತ್ತದೆ ಅಂದರೆ ಎಲ್ಲ ಹುರುಳುಗಳು (objects) ತಾನಿರುವ ಅಳತೆಯಲ್ಲಿ ಕಾಣುತ್ತವೆ, ಇದರಿಂದ ಓಡಿಸುಗನಿಗೆ ಕಾರಿನ ಹಿಂಬದಿಯ ಆಚೆಕಾಣುವ ನೋಟ ಆಗಿದ್ದರೆ ಹೇಗೆ ಕಾಣುತ್ತದೆ ಹಾಗೆ ಇದು ಕೂಡ ಅದೇ ಬಗೆಯಲ್ಲಿ ಅದೇ ಆಳದ ಅಳತೆಯ ಜೊತೆ ಆಚೆಕಾಣುವ ಹಿಂಬದಿಯ ನೋಟ ನೀಡುತ್ತದೆ, ಇದನ್ನು ಈಗಿರುವ ತಿಟ್ಟುಕಗಳ/ತೋರುಕಗಳ (monitor) ಏರ‍್ಪಾಟುಗಳು ನೀಡಿಲ್ಲ.

ಸಕತ್ ಅಲ್ವಾ, ಮುಂದಕ್ಕೆ ಹೋಗುತ್ತ ಇಡೀ ಕಾರನ್ನು ಓಡಿಸುಗನಿಗೆ ಆಚೆಕಾಣುವ ಹಾಗೆ ಮಾಡಬೇಕೆಂಬ ಹೊಳಹು (idea) ಕೂಡ ಇದೆ!

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications