ವಾಡಿಕೆಯ ಚೌಕಟ್ಟನ್ನು ಮೀರುವ ‘ಹೊಸಬಗೆ ಕಲೆ’

 ಬಸವರಾಜ್ ಕಂಟಿ.

 ನಾನು ಮೊದಲ ಮತ್ತು ಹಿಂದಿನ ಬರಹದಲ್ಲಿ ಎರಡು ಮಾತುಗಳನ್ನು ಹೇಳಿದ್ದೆ:

1.  ಕುಂಚದಲ್ಲಿ ಗೀಚಿದ್ದೆಲ್ಲವೂ ಕಲೆಯಾಗುವದಿಲ್ಲ.

2.  ರಸ ಹುಟ್ಟಿಸುವ ಉದ್ದೇಶದಿಂದಲೇ ಮೂಡುವ ಒಂದು ಮಾಡುಗೆಗೆ ಕಲೆ ಎನ್ನುತ್ತಾರೆ.

ಇವೆರಡು ಮಾತುಗಳಿಗೆ ಇದಿರಾಗಿ ಮತ್ತು ಈ ನಂಬಿಕೆಗಳಿಗೆ ಸಡ್ಡು ಹೊಡೆಯಲೆಂದೇ ಹುಟ್ಟಿದ ಕಲೆಗೆ ಹೊಸಬಗೆಯ ಕಲೆ ಎನ್ನುಬಹುದು. ಈ ಬಗೆಯ ಕಲೆಯನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳಲ್ಲಿ ಮಾತ್ರ ಕಾಣುತ್ತೇವೆ. ಚಿತ್ರಕಲೆಯು (ಅತವಾ ಶಿಲ್ಪಕಲೆಯು) ಒಂದು “ಕತೆ”ಯನ್ನು ಹೇಳಬೇಕು, ಮತ್ತು ಆ ಮೂಲಕ ನಮ್ಮಲ್ಲಿ ಬಾವನೆ ಊಂಟುಮಾಡಬೇಕು ಎನ್ನುವ ವಿಚಾರದಿಂದ ದೂರ Duchamp_Fountaineಸರಿದು, ಅನೇಕ ಪ್ರಯೋಗಗಳಿಗೆ ಒಳಪಟ್ಟು, ಒಂದು ಕಚಿತ ರೂಪವಿಲ್ಲದಿದ್ದರೂ (abstract) ಅದು ಕಲೆಯೇ ಎನ್ನುವ ಹಂತಕ್ಕೆ ಈ ‘ಹೊಸಬಗೆಯ ಕಲೆ‘ (Modern Art) ಬಂದಿದೆ. ಇದಕ್ಕೆ ಉತ್ತಮ ಎತ್ತುಗೆಯೆಂದರೆ M ನ ಉಚ್ಚೆ ಹೊಯ್ಯುವ ಪಿಂಗಾಣಿ ಕುಡಿಕೆಯೇ ಕಲೆಯೆಂದು ಗುರುತಿಸಲ್ಪಟ್ಟಿದ್ದು!

ಸಾಂಪ್ರದಾಯಿಕ ಚಿತ್ರಕಲೆಗಳಲ್ಲಿ ಕಣ್ಣಿಗೆ ತೋರುವುದನ್ನು ಯತಾವತ್ತಾಗಿ ಹಿಡಿದಿಡಲು ಕಲಾವಿದರು ಸಾಕಶ್ಟು ಪ್ರಯತ್ನ ಪಡುತ್ತಿದ್ದರು. ಒಂದು ಚಿತ್ರ ನಿಜಕ್ಕೆ ಎಶ್ಟು ಹತ್ತಿರವಾಗಿದೆ ಎನ್ನುವುದರ ಮೇಲೆ ಅದರ ಗುಣಮಟ್ಟ ಅಳೆಯಲಾಗುತ್ತಿತ್ತು. ಆದರೆ, ಇಪ್ಪತ್ತನೇ ಶತಮಾನದ ಶುರುವಿನಲ್ಲಿ, ಅಂತಹ ಯೋಚನೆಯನ್ನು ಬದಿಗೊತ್ತಿ, ಚಿತ್ರಗಳ ಮೂಲಕ ತಮ್ಮ ವಿಚಾರಗಳನ್ನು ಹೇಳುವಂತಹ ಪ್ರಯೋಗಗಳನ್ನು ಕಲಾವಿದರು ನಡೆಸಿದರು. ಅರ‍್ದಂಬರ‍್ದ ಬಿಡಿಸಿದ ಅತವಾ ಪುಟ್ಟ ಮಗುವೊಂದು ಬಿಡಿಸಿದಂತೆ ಕಾಣುವ ಇಂತಹ ಚಿತ್ರಗಳಲ್ಲಿ, ದಿಟಕ್ಕಿಂತ, ಅದು ತೋರುವ ಹುರುಳಿಗೇ ಹೆಚ್ಚು ಮನ್ನಣೆ. ಹೆಸರಾಂತ ಕಲಾವಿದ ಪಿಕಾಸ್ಸೊ ನ “ಎವಿಗ್ನಾನಿನ ಹೆಂಗಳೆಯರು” ಇಂತಹ ಒಂದು ಪ್ರಯತ್ನ. ಹೊತ್ತು ಸರಿದಂತೆ ಇಂತಹ ಅನೇಕ ಪ್ರಯತ್ನಗಳಿಗೆ ಹೊಸಕಲೆ ಒಳಗೊಂಡಿತು.

ಈಗಿನ ಹೊಸ ಕಲೆಯಲ್ಲಿ, ಒಂದು ಚಿತ್ರ ಮೂಡಿಸುವ ಬಾವನೆ ಅತವಾ ಯೋಚನೆಗಳು ರಸಿಕರ ಕಲ್ಪನೆ ಅತವಾ ಮನಸ್ತಿತಿ ಮೇಲೆ ಅವಲಂಬಿತವಾಗಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಚಿತ್ರವೊಂದು ನಿರ‍್ದಿಶ್ಟ ತಿರುಳು ಹೊಂದಿರದೆ, ಅದನ್ನು ನೋಡಿದ ಎಲ್ಲ ರಸಿಕರ ಮನಸ್ಸಿನಲ್ಲಿಯೂ ಬೇರೆ ಬೇರೆ ಬಾವನೆ/ಯೋಚನೆ ಮೂಡಬಹುದು ಅತವಾ ಯಾವ ಯೋಚನೆಯೂ ಮೂಡದಿರಬಹುದು. ಈ ಯಾವ ಯೋಚನೆಯೂ ಮೂಡದಿರುವ ಮನಸ್ತಿತಿಯನ್ನು ಉಂಟುಮಾಡುವುದೂ ಒಂದು ಕಲೆಯೇ ಎನ್ನುವುದು ಹೊಸಕಲೆಗಾರರ ವಾದ. ಎತ್ತುಗೆಗೆ, ಅನೇಕ ವಿಶಯಗಳನ್ನು ಒಟ್ಟಿಗೆ ಹೇಳುವ ಮಾರ‍್ಕ್ ಚಾಗಲ್ ನ “ಅಯ್ ಆಂಡ್ ದ ವಿಲೇಜ್”, ಮತ್ತು ಕಸಿಮಿರ್ ಮಲೇವಿಚ್ ನ “ಬ್ಲಾಕ್ ಸ್ಕ್ವೇರ‍್” ತಿಟ್ಟಗಳು.

ಅಯ್ ಆಂಡ್ ದ ವಿಲೇಜ್                                                             ಬ್ಲಾಕ್ ಸ್ಕ್ವೇರ‍್

invillage

800px-Malevich.black-square

 

“ರೂಪವಿಲ್ಲದ” (abstract) ಚಿತ್ರಕಲೆಯು ಇಪ್ಪತ್ತನೇ ಶತಮಾನದ ನಡುವಿನಲ್ಲಿ ಬೆಳಕಿಗೆ ಬಂದಿತು. ಜಾಕ್ಸನ್ ಪೊಲಾಕ್ ಈ ಬಗೆಯ ಕಲೆಯಲ್ಲಿ ಮುಂಚೂಣಿಯಲ್ಲಿದ್ದವರು. ಅವರ ಚಿತ್ರಗಳು ಹಲವಾರು ಮಿಲಿಯನ್ ಡಾಲರ್ ಗಳಿಗೆ ಬಿಕರಿಯಾಗಿವೆ. ಅವರ “ನಂಬರ್ 5, 1948” ಚಿತ್ರವನ್ನು ಕೆಳಗೆ ತೋರಿಸಲಾಗಿದೆ.

No._5,_1948

ಈ ರೀತಿ “ರೂಪವಿಲ್ಲದ” ಕಲೆಬಗೆಯು ಚಿತ್ರಕಲೆಗೆ ಮಾತ್ರ ಸೀಮಿತವಾಗಿರದೆ, ಶಿಲ್ಪಕಲೆಗೂ ವಿಸ್ತರಿಸಿದೆ. ಲಾಸ್ ಎಂಜಲೀಸ್ ನ ತೋರುಮನೆಯೊಂದರಲ್ಲಿ ಇಟ್ಟಿರುವ 340 ಟನ್ನು ತೂಕದ “ಲೆವಿಟೆಟೆಡ್ ಮಾಸ್” (Levitated Mass) ಎಂಬ ಕಲ್ಲು ಬಂಡೆಯನ್ನು ಕಲೆ ಎಂದು ಗುರುತಿಸಲಾಗಿದೆ.

Levitated Mass

1860 ರಿಂದ ಇಪ್ಪತನೇ ನೂರೇಡಿನವರಿಗೂ, ಈ ರೀತಿ ಸಾಂಪ್ರದಾಯಿಕ ವಿಚಾರಗಳನ್ನು ಬದಿಗೊತ್ತಿ, ತಮ್ಮದೇ ಕಲ್ಪನೆಗಳ ಮೂಲಕ ಪ್ರಯೋಗ ನಡೆಸಿ ತುಂಬಾ ಜನರು ಹೆಸರು ಮಾಡಿದರು. ಅವರು ಬಿಡಿಸಿದ ಚಿತ್ರ, ಶಿಲ್ಪಗಳೆಲ್ಲ ಹೆಚ್ಚು ಹೆಚ್ಚು ದುಡ್ಡಿಗೆ ಮಾರಾಟವಾಗಿ ಜಗತ್ತಿನ ಕಲೆ ತೋರುಮನೆಗಳಲ್ಲಿ ಹೊಸಬಗೆಯ ಮಾಡುಗೆಗಳೇ ತುಂಬಿಕೊಂಡವು. ಸಾಂಪ್ರದಾಯಿಕ ಕಲೆಯನ್ನೇ ನಿಜವಾದ ಕಲೆ ಎಂದು ನಂಬಿರುವವರು, ಗುಣಮಟ್ಟವೇ ಇಲ್ಲವೆಂದು ಈ ಹೊಸಕಲೆಯನ್ನು ಬಲವಾಗಿ ವಿರೋದಿಸಿದರೆ, ಹೊಸಕಲೆಯು ಅಸಾಂಪ್ರದಾಯಿಕತ್ವ, ಹೊಸತನ, ದಿಟ್ಟತನದಿಂದ ಕೂಡಿದೆ ಎಂದು ಅದನ್ನು ಬೆಂಬಲಿಸುವವರೂ ಬಹಳಶ್ಟು ಜನ ಇದ್ದಾರೆ.

(ಚಿತ್ರ ಸೆಲೆ: wikipediastlmag.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: