ಕನ್ನಡವೇ ಎಮ್ಮಯ ಸೊಲ್ ನುಡಿಯು

– ಕೌಸಲ್ಯ.

kannada-nudi-tayi

ಕನ್ನಡ ಕನ್ನಡ ಪೇಳುವೆನು
ಕನ್ನಡವೇ ಎನ್ನಯ ಸೊಲ್ ನುಡಿಯು
ಕನ್ನಡವೇ ಎಮ್ಮಯ ಪಡೆನುಡಿಯು

ಕನ್ನಡ ಕನ್ನಡವೆಂದೊಡೆ
ಪುರಜನ ಹಿಗ್ಗುವರು
ಕನ್ನಡಮ್ಮನ ಸೇವೆಗಯ್ವೊಲ್
ಶಿರಬಾಗಿ ನಡೆವರು

ನೊಸಲಲಿ ತೀಡಿದ ಬರಹವು ಕನ್ನಡ
ಜಿಹ್ವೆಯು ನುಲಿಯುವ ಸಿರಿಗನ್ನಡ
ನಯನದ ಕಾಂತಿಯು ಕನ್ನಡ
ಕರಣದ ಇಂಪದು ಸವಿಗನ್ನಡ

ಜ್ನಾನದೀವಿಗೆ ಕನ್ನಡ
ಕರುನಾಡ ಜ್ಯೋತಿಯು ಕನ್ನಡ
ಸಾತ್ವಿಕ ಜಗದೊಳು
ತನುಮನವೂ ಕನ್ನಡ

ಇತಿಹಾಸ ಶಾಸನದಿ
ಹಲ್ಮಿಡಿಯ ವೈಬವ
ಕಾವೇರಿಯಿಂದಲಿ ಗೋದಾವರಿಯೆಡೆಗೆ
ಪಸರಿಸಿದ್ದ ಕನ್ನಡ
ಹಂಪಿಯ ರತದಲಿ ಮೆರೆದ ಕನ್ನಡ
ಬೇಲೂರ ಶಿಲ್ಪದಿ ತೀಡಿದ ಕನ್ನಡ

ರತ್ನಾತ್ರಯರಲಿ ನಲಿದಾಡಿದ ಕನ್ನಡ
ಕುಮಾರವ್ಯಾಸನು ಕುಣಿದಾಡಿಸಿದ ಕನ್ನಡ
ರಾಜವಂಶದಿ ಪೌರುಶವ ಹುಟ್ಟಿಸಿದ ಕನ್ನಡ
ಶತ್ರುಗಳ ರುಂಡವ ಅಟ್ಟಾಡಿಸಿದ ಕನ್ನಡ

ಕನ್ನಡವೇ ಎಮ್ಮಯ ಸೊಲ್ ನುಡಿಯು
ಕನ್ನಡ ಎಂಬುದೆ ಎಮ್ಮಯ ದಿವ್ಯಮಂತ್ರವು

(ಚಿತ್ರ ಸೆಲೆ: mangaloretips.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: