ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ..

– ಸಿಂದು ಬಾರ‍್ಗವ್.

 

ನಿನ್ನ ಕಂಡಾಗೆಲ್ಲ
ನೆನಪು ಮತ್ತೆ ಕಾಡುವುದು
ದಿನವ ದೂಡಬೇಕಲ್ಲ
ಮರೆತಂತೆ ನಟಿಸುವುದು

ಮಾತು ಮೂಕವಾಗಿದೆ
ಕಣ್ಣಸನ್ನೆ ಮರೆತ ಹಾಗಿದೆ
ನೋಟ ಬೇರೆಯಾಗಿದೆ
ಹಾಡು ಹುಟ್ಟಿಕೊಂಡಿದೆ

ಕಣ್ಣಹನಿಯೂ
ಸದ್ದಿಲ್ಲದೇ ಉರುಳುತಿದೆ
ಎದೆಬಡಿತವು
ಬಿಡದೇ ಬಡಿಯುತಿದೆ

ವಿರಹದ ಗೀತೆ ಮೂಡಿದೆ
ಮನವು ಮೌನವಾಗಿದೆ
ಪದಗಳ ಉಸಿರು ನಿಂತಿದೆ
ಕಲಮ ಕೈಯಿಂದ ಜಾರಿದೆ

ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ
ತಂಪು ಕಂಗಳಿಂದ ಅದನು ನಾನು ನೋಡಬೇಕಿದೆ

( ಚಿತ್ರ ಸೆಲೆ: theguardian.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: