ಮೇರು ಚಿತ್ರಗಳ ಸಾಲಿನಲ್ಲಿ ನಿಲ್ಲುವ ‘ಅರೈವಲ್’ ಚಲನಚಿತ್ರ

– ಕರಣ ಪ್ರಸಾದ.

arrival-long-poster

ಇತ್ತೀಚೆಗೆ ಹಾಲೀವುಡ್ ಕೂಡ ನಿರ‍್ದಿಶ್ಟ ಪಾರ‍್ಮುಲದ ಚಲನಚಿತ್ರಗಳಿಗೆ ಸೀಮಿತವಾದಂತಿದೆ. ಉದಾಹರಣೆಗೆ ಸೂಪರ್ ಹೀರೊ ಎಂಬ ಕಮರ‍್ಶಿಯಲ್ ಎಲಿಮೆಂಟ್ ಇರುವ ಚಿತ್ರಗಳು. ಈ ತರಹದ ಚಲನಚಿತ್ರಗಳೇನೋ ತಾಂತ್ರಿಕವಾಗಿ ಚೆನ್ನಾಗಿದ್ದರೂ ಚಿತ್ರಕತೆಯೆಲ್ಲಾ ಒಂದೇ ಎನ್ನುವಂತೆ ಬಾಸವಾಗುತ್ತವೆ, ಆದರೆ ಇವನ್ನೆಲ್ಲಾ ಮೀರಿ ಕೆಲವು ಚಿತ್ರಗಳು ನಿಲ್ಲುತ್ತವೆ ಅಂತಹ ಕೆಲವು ಚಿತ್ರಗಳಲ್ಲಿ ನಾನು ಇತ್ತೀಚೆಗೆ ನೋಡಿದ ಹೊಸ ಚಲನಚಿತ್ರ “ಅರೈವಲ್”!

ನಿರ‍್ದೇಶಕ: ಡೆನ್ನಿಸ್ ವಿಲ್ಲೆನುವೆ
ಸಿನಿಮಟೋಗ್ರಪಿ: ಬ್ರಾಡ್ಪೊರ‍್ಡ್ ಯಂಗ್
ಚಿತ್ರಕತೆ: ಎರಿಕ್ ಹೆಸರ‍್ನರ್
ಹಿನ್ನೆಲೆ ಸಂಗೀತ: ಜೋಹಾನ್ ಜೋಹಾನ್ಸನ್

ಚಿತ್ರಕತೆ ಬಗ್ಗೆ
ಚಿತ್ರಕತೆಯು “ಟೆಡ್ ಚಿಯಾಂಗ್” ಅವರ ಕಿರುಕತೆ “ಸ್ಟೋರಿ ಆಪ್ ಯುವರ್ ಲೈಪ್” ನಿಂದ ಪ್ರೇರಿತವಾಗಿದೆ. ಆರಂಬ ನಿದಾನವಾದರೂ ಕತೆ ಮುಂದೆ ಸಾಗಿದ ಹಾಗೆ ಕುತೂಹಲ ಹುಟ್ಟಿಸುತ್ತದೆ. ರೇಟಿಂಗ್ 3.5/5

ನಿರ‍್ದೇಶನದ ಶೈಲಿ
ನಿರ‍್ದೇಶಕರು ತಮ್ಮ ಹಿಂದಿನ ಚಿತ್ರವಾದ “ಸಿಕ್ಯಾರೋ”ದ ಶೈಲಿಯನ್ನು ಇಲ್ಲೂ ಮುಂದುವೆರೆಸಿದ್ದಾರೆ. ಇದು ಇವರ ಆತ್ತ್ಯುತ್ತಮ ಚಿತ್ರಗಳಲ್ಲೊಂದಾಗಲಿದೆ. ರೇಟಿಂಗ್: 4/5

ಸಿನಿಮಟೋಗ್ರಪಿ
ಬ್ರಾಡ್ಪೊರ‍್ಡ್ ಯಂಗ್ರವರ ಪ್ರತಿ ಪ್ರೇಮ್ ಕಣ್ಣಿಗೆ ಮುದ ನೀಡುತ್ತದೆ, ವೈಡ್ ಮತ್ತು ಮೈಕ್ರೋ ಕ್ಲೋಸ್ ಅಪ್ ಅನ್ನು ಕತೆಗೆ ತಕ್ಕ ಹಾಗೆ ಹೊಂದಿಸಿದ್ದಾರೆ. ರೇಟಿಂಗ್: 3.5/5

ತಾರಾಗಣ
ಎರಡು ಪಾತ್ರಗಳು ಇಡೀ ಚಿತ್ರವನ್ನೇ ತುಂಬಿಕೊಂಡಿವೆ. ಒಂದು ನುಡಿಯರಿಗರಾಗಿ “ಆಮ್ಮಿ ಆಡಮ್ಸ್” ಮತ್ತು ಸೈಂಟಿಸ್ಟ್ ಆಗಿ “ಜೆರೆಮಿ ರನ್ನರ‍್”. ಮುಕ್ಯವಾಗಿ ಆಮ್ಮಿ ಆಡಮ್ಸ್ ರವರು ಈ ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ (ಆಸ್ಕರ್ ಗೆ ನಾಮಿನೇಟ್ ಆದ್ರೂ ಆಶ್ಚರ‍್ಯವಿಲ್ಲ.)

ಚಿತ್ರ ನೋಡಲೇಬೇಕಾದ ಕಾರಣ?
ಕೊನೆಯ ಹತ್ತು ನಿಮಿಶಗಳ ಕಾಲ ಚಲನಚಿತ್ರವು ಪ್ರೇಕ್ಶಕರನ್ನು ಬೇರೆ ಲೋಕಕ್ಕೆ ಕೊಂಡೊಯುತ್ತದೆ. ಇದು ಸೈನ್ಸ್ ಪಿಕ್ಶನ್ ಕತೆಯಾದರೂ ಕೊನೆಯ ಹತ್ತು ನಿಮಿಶದಲ್ಲಿ ಮನುಶ್ಯನ ಸಂಬಂದಗಳ ಆಳವನ್ನು ಕೆದಕುತ್ತದೆ.
ಒಟ್ಟು ಚಲನಚಿತ್ರದ ರೇಟಿಂಗ್: 4/5

(ಚಿತ್ರ ಸೆಲೆ: funcobra.info)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.