ಬರೆದೆ ಇನಿಯನಿಗೊಂದು ಪತ್ರ

– ಸುರಬಿ ಲತಾ.

 

ಬರೆದೆ ಇನಿಯನಿಗೊಂದು ಪತ್ರ
ಕಣ್ಣ ತುಂಬಾ ಅವನದೇ ಬಾವಚಿತ್ರ
ಬರಲಿಲ್ಲ ಏಕೆ ಇನ್ನೂ ಅವನು
ಮೇಗಗಳೆ ಕರೆತನ್ನಿ ನನ್ನವನನ್ನು

ಮುತ್ತು ಸುರಿವಂತೆ ಮಾತಾಡುತ್ತಿದ್ದ
ಮಾತು ಮಾತಿಗೆ ಜೇನು ಸುರಿಸುತ್ತಿದ್ದ
ಇಂದು ನನ್ನಿಂದ ಏಕೆ ದೂರಾದ
ಬೇಡವಾದಳೇ ಈ ರಾದ

ಹಳಸಾಯಿತೇ ಪ್ರೀತಿ
ಬೇಸರವಾಯಿತೇ ನನ್ನ ರೀತಿ
ಹೊಸತನವ ಹುಡುಕಿ ಹೊರೆಟೆಯಾ
ಹೊಸ ಪ್ರೀತಿ ಬೇಕಾಗಿದೆಯಾ

ಎಲ್ಲಾದರು ಇರು ನೀನು
ನನ್ನಂತೆ ಪ್ರೀತಿಸರು ಯಾರು ನಿನ್ನನು
ನಿನಗಾಗೇ ಕಾದಿರುವ ನನ್ನನು
ಮರೆಯಲಾದೀತೇ ನೀನು

ಹುಡುಕಾಟ ಸಾಕಾದಾಗ
ದಣಿವು ನಿನ್ನ ಆವರಿಸಿದಾಗ
ನೆನಪಿಸಿಕೊ ನನ್ನ
ನಾ ಬಂದು ಸೇರುವೆ ನಿನ್ನ

( ಚಿತ್ರ ಸೆಲೆ:  themindfulword.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: