ಸರಿದ ನೆನಪುಗಳ ಮರೆಯಲು ಸಾದ್ಯವಿಲ್ಲ

– ಸುರಬಿ ಲತಾ.

ಪ್ರೀತಿಸುವ ಇರಾದೆ ಇಲ್ಲ ಆದರೆ
ಕಳೆದು ಕೊಳ್ಳುವ ಇಚ್ಚೆಯೂ ಇಲ್ಲ
ಪಡೆಯಲೂ ಸಾದ್ಯವಿಲ್ಲ
ಮರೆಯಲೂ ಸಾದ್ಯವಿಲ್ಲ

ಸಣ್ಣ ವಿಶಯಕ್ಕೆ ಕಣ್ಣು ತುಂಬಿ
ಬರುವ ಮನಕ್ಕೆ
ಸಂತೈಸಲೂ ಸಾದ್ಯವಿಲ್ಲ
ತನ್ನಶ್ಟಕ್ಕೆ ಬಿಡಲೂ ಸಾದ್ಯವಿಲ್ಲ

ಮುಕದ ಉದಾಸಿ ನೋಡಲು
ಸಾದ್ಯವಿಲ್ಲ. ಹಾಗಂತ ಮುಗಿಲ
ತಾರೆ ತಂದು ಕೊಡಲೂ ಸಾದ್ಯವಿಲ್ಲ

ಇಬ್ಬರ ಮದ್ಯೆ ಪರದೆಗಳು ಸಾಲು
ಹಾಕಿವೆ, ಒಳ ಬರಲೂ ಸಾದ್ಯವಿಲ್ಲ
ಹೊರ ನಿಲ್ಲಲೂ ಸಾದ್ಯವಿಲ್ಲ
ಎರಡೂ ಮನದಲ್ಲಿ ನಡೆವ
ಹೋರಾಟ ಬಲ್ಲವರಾರಿಲ್ಲ

ಜೀವನ ಪೂರ‍್ತಿ ನೆನೆಯುವ ಬಾಶೆ
ಕೊಟ್ಟಿಲ್ಲ, ಆದರೆ ಒಂದು ಕ್ಶಣವೂ
ಸರಿದ ನೆನಪುಗಳ ಮರೆಯಲು
ಸಾದ್ಯವಿಲ್ಲ

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: