ಮಾತು ಮೌನವಾಗಿದೆ…

– ಸುರಬಿ ಲತಾ.

ಮನಸಿನಲ್ಲಿರೋದು ಹೇಗೆ
ಹೇಳಲೋ ಇನಿಯ
ಮಾತೇ ಮೌನವಾಗಿದೆ
ಎದೆ ಬಡಿತ ಜೋರಾಗಿದೆ

ಅವನ ಕಂಡಾಗ ಕಣ್ಣು
ರೆಪ್ಪೆ ಬಡಿಯದೇ ನಿಂತಿವೆ
ಮನದಲ್ಲಿ ಅವನದೇ
ಚಿತ್ರ ಅಚ್ಚಾಗಿದೆ

ಹ್ರುದಯದಲ್ಲಿ ಅವನ ಪಡೆವ
ಆಸೆ ಬಲವಾಗಿ ಹಿಡಿದಿದೆ
ಅವನಲ್ಲಿ ಹೇಳಲು ಬಯವಾಗಿದೆ
ಬಯಕೆ ತೀರುವುದು ಕನಸಾಗಿದೆ

ಬರುವೆ ಏಕೆ ನಡುವೆ ನಾಚಿಕೆ
ತೊಲಗಿ ಹೋಗೇ ಅಂಜಿಕೆ
ನುಡಿಯ ಬೇಕಿದೆ ಅವನಲ್ಲಿ
ಹುದುಗಿ ಹೋಗಬೇಕಿದೆ ಎದೆಯಲ್ಲಿ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: